ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ ಪ್ರಕರಣ: ಈವರೆಗೆ ಒಟ್ಟು 29 ಎಫ್​ಐಆರ್​​​ ದಾಖಲು - ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ

ನಿನ್ನೆಯವರೆಗೂ 22 ಪ್ರಕರಣ ದಾಖಲಾಗಿದ್ದವು. ‌ಇಂದು ಹೊಸದಾಗಿ ಮತ್ತೆ 7 ಎಫ್ಐಆರ್ ದಾಖಲಾಗಿವೆ. ಆಸ್ತಿ ನಷ್ಟ ಹಾಗೂ ವಾಹನ ಧ್ವಂಸ ಮಾಡಿದ್ದಾರೆ ಎಂದು ದೂರಿ ಸಾರ್ವಜನಿಕರು ದೂರು ನೀಡಿದನ್ವಯ ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

29 FIR Registered in related to Bangalore riot case
ಗಲಭೆ ಪ್ರಕರಣ: ಇದುವರೆಗೂ ಪೊಲೀಸರಿಂದ 29 ಎಫ್​ಐಆರ್​​​ ದಾಖಲು

By

Published : Aug 14, 2020, 6:10 PM IST

ಬೆಂಗಳೂರು: ನಗರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಡಿ‌ಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಇದುವರೆಗೂ ಒಟ್ಟು 29 ಪ್ರಕರಣಗಳು‌ ದಾಖಲಾಗಿವೆ.

ನಿನ್ನೆಯವರೆಗೂ 22 ಪ್ರಕರಣ ದಾಖಲಾಗಿದ್ದವು. ‌ಇಂದು ಹೊಸದಾಗಿ ಮತ್ತೆ 7 ಎಫ್ಐಆರ್ ದಾಖಲಾಗಿವೆ. ಆಸ್ತಿ ನಷ್ಟ ಹಾಗೂ ವಾಹನ ಧ್ವಂಸ ಮಾಡಿದ್ದಾರೆ ಎಂದು ದೂರಿ ಸಾರ್ವಜನಿಕರು ದೂರು ನೀಡಿದನ್ವಯ ಡಿಜೆ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಲಭೆ ಸಂಬಂಧ ಇದುವರೆಗೂ 206 ಕಿಡಿಗೇಡಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳ ಪೈಕಿ 89 ಮಂದಿಯನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ‌ಇನ್ನುಳಿದ ಆರೋಪಿಗಳನ್ನು ಆಡುಗೋಡಿಯ ಸಿಎಆರ್ ಸೌತ್​​ನಲ್ಲಿ ಇಡಲಾಗಿದೆ.

ABOUT THE AUTHOR

...view details