ಬೆಂಗಳೂರು:ಗುಜರಾತ್ನಿಂದ ಪ್ರಾಣವಾಯು ಹೊತ್ತು ಆಗಮಿಸಿದ 28ನೇ ಆಕ್ಸಿಜನ್ ಎಕ್ಸ್ಪ್ರೆಸ್ ವಿಶೇಷ ರೈಲು ಭಾನುವಾರ ಸಂಜೆ 6:30 ರ ಸುಮಾರಿಗೆ ನಗರದ ವೈಟ್ಫೀಲ್ಡ್ ಕಂಟೇನರ್ ಡಿಪೋ ತಲುಪಿತು.
ಈ ವಿಶೇಷ ರೈಲು ಶನಿವಾರ ಬೆಳಗ್ಗೆ 11:45ಕ್ಕೆ ಗುಜರಾತ್ನ ಕಾನಾಲಸ್ನಿಂದ ಹೊರಟಿತ್ತು. ಒಟ್ಟು 6 ಕ್ರಯೋಜೆನಿಕ್ (cryogenic) ಕಂಟೇನರ್ಗಳ ಮೂಲಕ 117.11 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದೆ. ಇದುವರೆಗೆ ರಾಜಧಾನಿ ಬೆಂಗಳೂರಿಗೆ 28 ರೈಲುಗಳ ಮೂಲಕ 3,213.99 ಟನ್ ದ್ರವ ವೈದ್ಯಕೀಯ ಆಮ್ಲಜನಕ ತರಲಾಗಿದೆ.