ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 282 ಜನರಿಗೆ ಕೋವಿಡ್ ಸೋಂಕು ದೃಢ: 13 ಮಂದಿ ಸಾವು - ರಾಜ್ಯದಲ್ಲಿ ಇಂದು ಪತ್ತೆಯಾದ ಕೊರೊನಾ ಕೇಸ್​ ಟಪ್​ಡೇಟ್ಸ್

ಬೆಂಗಳೂರಿನಲ್ಲಿ 142 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,51,155ಕ್ಕೆ ಏರಿಕೆಯಾಗಿದೆ. 174 ಜನರು ಗುಣಮುಖರಾಗಿದ್ದು, 12,28,469 ಜನರು ಡಿಸ್ಜಾರ್ಜ್ ಆಗಿದ್ದಾರೆ. 6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,259ರಷ್ಟಿದೆ. ಸದ್ಯ 6,426 ಪ್ರಕರಣ ಸಕ್ರಿಯವಾಗಿವೆ..

corona
ಕೋವಿಡ್

By

Published : Oct 27, 2021, 8:21 PM IST

Updated : Oct 27, 2021, 10:25 PM IST

ಬೆಂಗಳೂರು :ರಾಜ್ಯದಲ್ಲಿಂದು 1,73,351 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಈ ಪೈಕಿ 282 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 29,86,835ಕ್ಕೆ ಏರಿಕೆಯಾಗಿದೆ. ಈ ಮೂಲಕ ಪಾಸಿಟಿವಿಟಿ ದರ ಶೇ. 0.24ರಷ್ಟಿದೆ.

ಇಂದು ಸೋಂಕಿನಿಂದ 349 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ವಿವಿಧ ಆಸ್ಪತ್ರೆಗಳಿಂದ ಸುಮಾರು 29,40,339 ಜನರು ಡಿಸ್ಜಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 8430 ಪ್ರಕರಣ ಸಕ್ರಿಯವಾಗಿವೆ.

ಸೋಂಕಿಗೆ ಈ ದಿನ 13 ಜನರು ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 38,037ಕ್ಕೆ ಏರಿದೆ. ಈ ಮೂಲಕ ಸಾವಿನ ಪ್ರಮಾಣ ಶೇ.4.60ರಷ್ಟಿದೆ.

ವಿಮಾನ ನಿಲ್ದಾಣದಿಂದ 1,488 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆ ಮಾಡಲಾಗಿದೆ. 295 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ಬೆಂಗಳೂರಿನಲ್ಲಿ 142 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,51,155ಕ್ಕೆ ಏರಿಕೆಯಾಗಿದೆ. ಇನ್ನು, 174 ಜನರು ಗುಣಮುಖರಾಗಿದ್ದು, 12,28,469 ಜನರು ಡಿಸ್ಜಾರ್ಜ್ ಆಗಿದ್ದಾರೆ. 6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,259ರಷ್ಟಿದೆ. ಸದ್ಯ 6,426 ಪ್ರಕರಣ ಸಕ್ರಿಯವಾಗಿವೆ.

ರೂಪಾಂತರಿ ವೈರಸ್ ಅಪಡೇಟ್ಸ್:

1) ಡೆಲ್ಟಾ ( Delta/B.617.2) - 1679

2)ಆಲ್ಫಾ(Alpha/B.1.1.7) - 155

3) ಕಪ್ಪಾ (Kappa/B.1.617) 160

4)ಬೀಟಾವೈರಸ್ (BETA/B.1.351) -8

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4

6) ಈಟಾ (ETA/B.1.525) - 1

7)ಡೆಲ್ಟಾ ಸಬ್ ಲೈನ್ ಏಜ್ (AY.4- 2568) ಡೆಲ್ಟಾ ಸಬ್ ಲೈನ್ ಏಜ್ AY .12- 15

9 ಜಿಲ್ಲೆಯಲ್ಲಿಂದು ಸೋಂಕಿನ ಪ್ರಮಾಣ ಶೂನ್ಯ :ರಾಜ್ಯದಲ್ಲಿಂದು ಬಾಗಲಕೋಟೆ, ಬೀದರ್, ಚಾಮರಾಜನಗರ, ಗದಗ, ಹಾವೇರಿ, ಕಲಬುರಗಿ ಹಾಗೂ ವಿಜಯಪುರ, ಯಾದಗಿರಿ, ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.

ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾಸನ, ಮೈಸೂರು, ತುಮಕೂರು ಜಿಲ್ಲೆಯಷ್ಟೇ ಸಾವಿನ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಯಾವುದೇ ಸೋಂಕಿತರು ಮೃತಪಟ್ಟಿಲ್ಲ.

ಕೊರೊನಾ ನಿಯಮ ಪಾಲನೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೋಡೆಲ್ ಅಧಿಕಾರಿ ನೇಮಕ :ಕೋವಿಡ್​ ಕೇಸ್​ಗಳು ರಾಜ್ಯದಲ್ಲಿ ಇಳಿಕೆಯಾಗುತ್ತಿವೆ. ಕೋವಿಡ್​ ನಿಯಮಗಳನ್ನು ಕಚೇರಿಗಳಲ್ಲಿ ಗಾಳಿಗೆ ತೂರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರತಿ ಕಚೇರಿಯ ಕರ್ತವ್ಯದ ಅವಧಿಯಲ್ಲಿ ಎಲ್ಲಾ ಸಿಬ್ಬಂದಿ ಹಾಗೂ ಸಂದರ್ಶಕರು ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡುವುದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ( ಆಯಾ ಕಚೇರಿಯ ಒಬ್ಬ ಅಧಿಕಾರಿ) ನೇಮಿಸುವಂತೆ ಸೂಚಿಸಲಾಗಿದೆ.

ಒಂದು ವೇಳೆ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಪಾಲನೆ ಮಾಡದೆ ಇದ್ದರೆ ಹಾಗೂ ಪದೇಪದೆ ಉಲ್ಲಂಘನೆ ಕಂಡು ಬಂದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ. ಜೊತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಲಾಗಿದೆ.

Last Updated : Oct 27, 2021, 10:25 PM IST

ABOUT THE AUTHOR

...view details