ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 2,756 ಕೊರೊನಾ ಕೇಸ್​​ ಪತ್ತೆ: 26 ಮಂದಿ ಸೋಂಕಿತರು ಬಲಿ

ರಾಜ್ಯದಲ್ಲಿಂದು 2,756 ಮಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು, ‌7140 ಸೋಂಕಿತರು ಗುಣಮುಖರಾಗಿದ್ದಾರೆ. ಕೋವಿಡ್​ಗೆ ಇಂದು 26 ಮಂದಿ ಬಲಿಯಾಗಿದ್ದಾರೆ.

ಕೋವಿಡ್

By

Published : Nov 3, 2020, 8:29 PM IST

Updated : Nov 3, 2020, 10:31 PM IST

ಬೆಂಗಳೂರು:ರಾಜ್ಯದಲ್ಲಿಂದು ಕೂಡ ಸೋಂಕಿತರ ಸಂಖ್ಯೆ ಇಳಿಕೆಯ ದಾರಿ ಕಂಡಿದ್ದು, 2,756 ಮಂದಿಗೆ ಕೊರೊನಾ‌ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,32,396ಕ್ಕೆ ಏರಿಕೆ ಆಗಿದೆ.‌

ಇತ್ತ ಸೋಂಕಿಗೆ 26 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 11,247ಕ್ಕೆ ಏರಿಕೆಯಾಗಿದೆ. ಇಂದು 7140 ಸೋಂಕಿತರು ಗುಣಮುಖರಾಗಿದ್ದು, 7,80,735 ಜನರು ಡಿಸ್ಜಾರ್ಜ್ ಆಗಿದ್ದಾರೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.‌

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಸದ್ಯ 40,395 ಇದ್ದು, 932 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಕಳೆದ 7 ದಿನಗಳಿಂದ 54,475 ಮಂದಿ ಹೋಂ ಐಸೋಲೇಷನ್​ನಲ್ಲಿ ಇದ್ದಾರೆ. ಪ್ರಾಥಮಿಕವಾಗಿ 2,71,052, ದ್ವಿತೀಯವಾಗಿ 2,71,209 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ವಿಮಾನ ನಿಲ್ದಾಣದಲ್ಲಿ 439 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ರಾಜ್ಯದಲ್ಲಿ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 2.91ರಷ್ಟು ಇದ್ದು, ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ. 0.94ರಷ್ಟಿದೆ. ಇಂದು 94,539 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದ್ದು, ಇದರಲ್ಲಿ 2,756 ಜನರಿಗೆ ಸೋಂಕು ದೃಢಪಟ್ಟಿದೆ.

Last Updated : Nov 3, 2020, 10:31 PM IST

ABOUT THE AUTHOR

...view details