ಬೆಂಗಳೂರು:ನಗರದ ಜನ ಲಾಕ್ಡೌನ್ನಿಂದ ಬೇಸತ್ತಿದ್ದಾರೆ. ಆದರೆ ಈ ಮಧ್ಯೆ ಒಂದಿಷ್ಟು ಸಮಾಧಾನದ ಸಂಗತಿ ಎಂದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗ್ತಿರೋದು. ಇದರಿಂದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಕೋವಿಡ್ ಪಾಸಿಟಿವ್ ಸಂಖ್ಯೆ 2 ಸಾವಿರಕ್ಕೆ ಇಳಿಕೆ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ 3 ಸಾವಿರಕ್ಕಿಂತ ಕಡಿಮೆಯಾಗಿದ್ದು, ಇಂದು 2,724 ಜನರಿಗೆ ಪಾಸಿಟಿವ್ ಬಂದಿದೆ.
ಬೊಮ್ಮನಹಳ್ಳಿಯಲ್ಲಿ 250, ದಾಸರಹಳ್ಳಿಯಲ್ಲಿ 93, ಪೂರ್ವ 384, ಮಹಾದೇವಪುರದಲ್ಲಿ 408, ಆರ್‌ಆರ್ ನಗರದಲ್ಲಿ 201, ದಕ್ಷಿಣದಲ್ಲಿ 181, ಪಶ್ಚಿಮದಲ್ಲಿ 223, ಯಲಹಂಕ 230 ಸೋಂಕು ದೃಢಪಟ್ಟಿವೆ.
ನಿನ್ನೆ ನಗರದಲ್ಲಿ 3,221 ಜನರಿಗೆ ಪಾಸಿಟಿವ್ ಬಂದಿದ್ದು, 206 ಮಂದಿ ಮೃತಪಟ್ಟಿದ್ದರು. ಸಕ್ರಿಯ ಪ್ರಕರಣಗಳ ಸಂಖ್ಯೆ 1,31,179 ಇದೆ.
ಮೇ 3 ರಂದು 65,169 ಜನರ ಟೆಸ್ಟ್ ನಡೆಸಲಾಗಿದ್ದು, 95,362 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ 6.79 ಇದ್ದು, ಮರಣ ಪ್ರಮಾಣ ಶೇ 6.7 ಇದೆ.