ಕರ್ನಾಟಕ

karnataka

ETV Bharat / state

ಎರಡನೇ ದಿನ 27 ಮಂದಿ ಶಾಸಕರ ಪ್ರಮಾಣವಚನ ಸ್ವೀಕಾರ: ಪ್ರತಿಜ್ಞಾವಿಧಿಗೆ ಸಮಯ ನೋಡಿದ ಶಾಸಕ ಎನ್.ಎಚ್ ಕೋನರೆಡ್ಡಿ

16ನೇ ವಿಧಾನಸಭೆ ಮೊದಲ ಅಧಿವೇಶನದ ಎರಡನೇಯ ದಿನವಾದ ಇಂದು 27 ಶಾಸಕರು ಪ್ರಮಾಣವಚನ ಸ್ವೀಕರಿಸಿದರು.

27-mlas-took-oath-on-the-second-day-of-the-assembly-session
ಎರಡನೇ ದಿನ 27 ಮಂದಿ ಶಾಸಕರ ಪ್ರಮಾಣವಚನ ಸ್ವೀಕಾರ: ಪ್ರತಿಜ್ಞಾವಿಧಿಗೆ ಸಮಯ ನೋಡಿದ ಶಾಸಕ ಎನ್.ಎಚ್ ಕೋನರೆಡ್ಡಿ

By

Published : May 23, 2023, 3:24 PM IST

Updated : May 23, 2023, 4:01 PM IST

ಬಿ.ವೈ ವಿಜಯೇಂದ್ರ ಪ್ರಮಾಣವಚನ ಸ್ವೀಕಾರದ ವಿಡಿಯೋ

ಬೆಂಗಳೂರು:ದೇವರು, ಸಂವಿಧಾನ, ಭಗವಂತ, ಸತ್ಯನಿಷ್ಠೆ ಹಾಗೂ ಕ್ಷೇತ್ರದ ಜನತೆ ಹೆಸರಿನಲ್ಲಿ ವಿಧಾನಸಭೆಯ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಹದಿನಾರನೇ ವಿಧಾನಸಭೆಯ ಅಧಿವೇಶನದ 2ನೇ ದಿನವಾದ ಇಂದು ಹಂಗಾಮಿ ಸಭಾಧ್ಯಕ್ಷರಾದ ಆರ್.ವಿ ದೇಶಪಾಂಡೆ ಅವರು ಸಂಪ್ರದಾಯದಂತೆ ನೂತನ ಸದಸ್ಯರ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸಿದರು.

ಇಂದು ವಿವಿಧ ಪಕ್ಷಗಳ 27 ಮಂದಿ ಶಾಸಕರು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಮೊದಲಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಪ್ರಭು ಶ್ರೀರಾಮಚಂದ್ರ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆ ಹೆಸರಿನಲ್ಲಿ ಪ್ರತಿಜ್ಙೆ ಮಾಡುವ ಮೂಲಕ ಪ್ರಮಾಣವಚನ ಸ್ವೀಕರಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳ್ಕರ್ ಜಗಜ್ಯೋತಿ ಬಸವಣ್ಣ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆ ಹೆಸರಿನಲ್ಲಿ ಪ್ರತಿಜ್ಙೆ ಸ್ವೀಕರಿಸಿದರು.

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಮಹೇಶ್ ಟೆಂಗಿನಕಾಯಿ, ಮಹಾಕೂಟೇಶ್ವರ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆ ಹೆಸರಿನಲ್ಲಿ ಪ್ರತಿಜ್ಙೆ ಸ್ವೀಕರಿಸಿದರು. ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಸಂವಿಧಾನ ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬಸವಕಲ್ಯಾಣ ಶಾಸಕ ಶರಣ ಸಲಗಾರ, ಶಿವಾರ್ಚಾರ್ಯರ ಆಶೀರ್ವಾದದೊಂದಿಗೆ ಛತ್ರಪತಿ ಶಿವಾಜಿಮಹರಾಜ್ ಹಾಗೂ ವಿಶ್ವ ಗುರು ಬಸವಣ್ಣ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಲಕ್ಷ್ಮೀ ಹೆಬ್ಬಾಳಕರ್​​ ಮತ್ತು ಮಹೇಶ್​ ಟೆಂಗಿನಕಾಯಿ ಪ್ರಮಾಣವಚನ ಸ್ವೀಕಾರ

ಕೂಡ್ಲಿಗಿ ಕ್ಷೇತ್ರದ ಎನ್.ಟಿ. ಶ್ರೀನಿವಾಸ್, ಸಂವಿಧಾನ, ಭಗವಂತ, ತಂದೆ-ತಾಯಿ ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿರಿಯೂರು ಶಾಸಕ ಡಿ. ಸುಧಾಕರ್ ಅವರು ತೇರುಮಲ್ಲೇಶ್ವರಸ್ವಾಮಿ ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಶ್ರೀನಿವಾಸಪುರ ಕ್ಷೇತ್ರದ ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ, ತಮ್ಮ ಕ್ಷೇತ್ರದ ಆರಾಧ್ಯದೈವ ಹುಚ್ಚರಾಯ ಸ್ವಾಮಿ ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಉಡುಪಿ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಅವರು, ಉಡುಪಿ ಶ್ರೀಕೃಷ್ಣ, ಶ್ರೀ ವಿಭುದೇಶಸ್ವಾಮೀಜಿ, ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಲಬುರಗಿ ದಕ್ಷಿಣ ಮತಕ್ಷೇತ್ರದ ಅಲ್ಲಮ ಪ್ರಭು ಪಾಟೀಲ್, ಶರಣಬಸವೇಶ್ವರ, ಸತ್ಯನಿಷ್ಠೆ ಹೆಸರಿನಲ್ಲಿ, ತರೀಕೆರೆ ಕ್ಷೇತ್ರದ ಜಿ.ಎಚ್. ಶ್ರೀನಿವಾಸ್ ಅವರು ಜಗನ್ಮಾತೆ ಹೆಸರಿನಲ್ಲಿ ಹಾಗೂ ಮದ್ದೂರಿನ ಉದಯ್ ಕೆ.ಎಂ. ಅವರು ಭಗವಂತ ಹಾಗೂ ಕ್ಷೇತ್ರದ ಜನತೆ ಹೆಸರಿನಲ್ಲಿ ಪ್ರತಿಜ್ಙಾವಿಧಿ ಸ್ವೀಕರಿಸಿದರು.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಹಾಗೂ ಹಂಗಾಮಿ ಸ್ಪೀಕರ್​​ ಆರ್​​ ವಿ ದೇಶಪಾಂಡೆ

ಉಳಿದಂತೆ ಶಶಿಕಲಾ ಜೊಲ್ಲೆ, ಮಂಜುಳಾ ಅರವಿಂದ ಲಿಂಬಾವಳಿ, ಮಾನಪ್ಪ ಡಿ.ವಜ್ಜಲ್, ಎಂ.ವೈ. ಪಾಟೀಲ್, ಎಸ್.ರಘು, ರವಿಕುಮಾರ್ (ಗಣಿಗ), ಸಂತೋಷ್ ಲಾಡ್, ಶಾಂತನಗೌಡ, ಎಸ್.ಆರ್. ಶ್ರೀನಿವಾಸ್ (ವಾಸು), ವಿ. ಸುನೀಲ್ ಕುಮಾರ್, ಎಚ್.ವಿ ವೆಂಕಟೇಶ್, ಕೆ ವೆಂಕಟೇಶ್, ಬಾಲಚಂದ್ರ ಜಾರಕಿಹೊಳಿ ಅವರು ಭಗವಂತ ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಸಮಯಕ್ಕಾಗಿ ಕಾದು ಕುಳಿತ ಕೋನರೆಡ್ಡಿ:ಪ್ರಮಾಣವಚನ ಸ್ವೀಕರಿಸಲು ಮೊದಲ ಬಾರಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಆಹ್ವಾನಿಸಿದರು. ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರೆಡ್ಡಿ ಸದನದಲ್ಲಿ ಹಾಜರಿದ್ದರೂ ಪ್ರಮಾಣವಚನ ಸ್ವೀಕರಿಸಲು ಹಿಂದೇಟು ಹಾಕಿದರು. ಎದ್ದು ನಿಂತು ಹತ್ತು ನಿಮಿಷ ಆದ ಮೇಲೆ ತೆಗೆದುಕೊಳ್ಳುತ್ತೇನೆ ಎಂದು ಕೋನರೆಡ್ಡಿ ಹೇಳಿದಾಗ, ಏನೂ ಟೈಮ್ ನೋಡ್ತಿದಿಯಾ? ಎಲ್ಲರೂ ತೆಗೆದುಕೊಳ್ಳುತ್ತಿದ್ದಾರೆ. ಒಳ್ಳೆಯ ಟೈಮಿದೆ ತೆಗೆದುಕೋ ಎಂದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಿನ್ನೆಯಿಂದ ಸದನದಲ್ಲಿ ಇದ್ದರೂ ಅರು ಪ್ರಮಾಣ ವಚನ ಸ್ವೀಕರಿಸಿರಲಿಲ್ಲ. ಸೂಕ್ತ ಸಮಯ ಬಂದ ಕೂಡಲೇ ಕೋನರೆಡ್ಡಿ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರತಿಜ್ಞಾವಿಧಿಗೆ ಸಮಯ ನೋಡಿದ ಶಾಸಕ ಎನ್.ಎಚ್ ಕೋನರೆಡ್ಡಿ

ನಾಳೆಗೆ ಸದನ ಮುಂದೂಡಿದ ಸ್ಪೀಕರ್:ವಿಧಾನಸಭೆಯಲ್ಲಿ ನೂತನ ಶಾಸಕರ ಪ್ರಮಾಣ ವಚನ ಮುಕ್ತಾಯವಾಗಿದ್ದು, ಇನ್ನು 16 ಮಂದಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿಲ್ಲ. ಪ್ರಮಾಣ ವಚನ ಸ್ವೀಕಾರ ಮಾಡುವವರು ತಮ್ಮ ಕೊಠಡಿಗೆ ಇಂದೇ ಬರುವಂತೆ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಸದಸ್ಯರಿಗೆ ಮನವಿ ಮಾಡಿದರು. ಪ್ರಮಾಣ ವಚನ ತೆಗೆದುಕೊಳ್ಳದೇ ಇರುವವರು ನಾಳೆ ನಡೆಯಲಿರುವ ಸ್ಪೀಕರ್ ಚುನಾವಣೆಯಲ್ಲಿ ಭಾಗವಹಿಸಲು ಬರುವುದಿಲ್ಲ. ಹೀಗಾಗಿ ಎಲ್ಲರೂ ಇವತ್ತೇ ಬಂದು ಪ್ರಮಾಣ ವಚನ ಸ್ವೀಕಾರ ಮಾಡುವಂತೆ ಸೂಚಿಸಿದರು. ಬಳಿಕ ನಾಳೆ ಬೆಳಗ್ಗೆ 11 ಗಂಟೆಗೆ ಸದನ ಮುಂದೂಡಿದರು.

ಪ್ರಮಾಣವಚನ ಸ್ವೀಕರಿಸಬೇಕಿರುವವರು:ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ, ಕರೆಮ್ಮ, ಬಿ.ಎನ್. ರವಿಕುಮಾರ್, ಎಚ್.ಡಿ ಮಂಜು, ಶಾರದಾಪೂರ್ಯ ನಾಯಕ್, ಸ್ವರೂಪ್ ಪ್ರಕಾಶ್, ಹೆಚ್.ಸಿ ಬಾಲಕೃಷ್ಣ, ದಿನೇಶ್ ಗುಂಡೂರಾವ್, ಪ್ರಿಯಾಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಮಧು ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಪ್ರಭು ಬಿ. ಚೌಹ್ಹಾಣ್, ರುದ್ರಪ್ಪ ಹಾಲಪ್ಪ ಲಮಾಣಿ, ಸಿ.ಬಿ. ಸುರೇಶ್ ಬಾಬು ಅವರು ಇಂದು ಪ್ರಮಾಣವಚನ ತೆಗೆದುಕೊಳ್ಳಲು ಸದನಕ್ಕೆ ಆಗಮಿಸಿರಲಿಲ್ಲ. ಇಂದೇ ಸ್ಪೀಕರ್ ಕೊಠಡಿಯಲ್ಲಿ ಪ್ರಮಾಣವಚನ ಸ್ಪೀಕರಿಸುವಂತೆ ಶಾಸಕರಿಗೆ ಇದೇ ವೇಳೆ ಸ್ಪೀಕರ್ ಮನವಿ ಮಾಡಿದರು. ಇದರದಲ್ಲಿ ಹೆಚ್ಚು ಜೆಡಿಎಸ್ ಸದಸ್ಯರು ಇದ್ದಾರೆ.

ಇದನ್ನೂ ಓದಿ:ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಸಕ ಯು ಟಿ ಖಾದರ್​.. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಾಥ್

Last Updated : May 23, 2023, 4:01 PM IST

ABOUT THE AUTHOR

...view details