ಕರ್ನಾಟಕ

karnataka

ETV Bharat / state

27 ಗ್ರಾಮ ಪಂಚಾಯತ್​​ಗಳ ಚುನಾವಣೆ ಕೈ ಬಿಟ್ಟ ರಾಜ್ಯ ಚುನಾವಣಾ ಆಯೋಗ!

ರಾಜ್ಯದ 5762 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯುವ ಬದಲು 5735 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯಲಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್​ಗೆ ಸೇನಾಪುರ ಗ್ರಾಮ ಸೇರ್ಪಡೆ ಪ್ರಶ್ನಿಸಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲಾಗಿದೆ.

27-grama-phanchayat-election-cancled-news
27 ಗ್ರಾ.ಪಂ. ಚುನಾವಣೆ ಕೈ ಬಿಟ್ಟ ರಾಜ್ಯ ಚುನಾವಣಾ ಆಯೋಗ

By

Published : Dec 5, 2020, 10:15 PM IST

ಬೆಂಗಳೂರು:ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿರುವ ಹಿನ್ನೆಲೆ 26 ಗ್ರಾಮ ಪಂಚಾಯತ್​ಗಳು ಹಾಗೂ ವಿಚಾರಣಾ ಹಂತದಲ್ಲಿರುವ ಒಂದು ಗ್ರಾಮ ಪಂಚಾಯತ್​ ಸೇರಿದಂತೆ ಒಟ್ಟು 27 ಗ್ರಾಮ ಪಂಚಾಯತ್​​ಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಕೈ ಬಿಟ್ಟಿದೆ.

27 ಗ್ರಾಪಂಗಳ ಚುನಾವಣೆ ಕೈ ಬಿಟ್ಟ ರಾಜ್ಯ ಚುನಾವಣಾ ಆಯೋಗ

ಹೀಗಾಗಿ ರಾಜ್ಯದ 5762 ಗ್ರಾಮ ಪಂಚಾಯಯತ್​​ಗಳಿಗೆ ಚುನಾವಣೆ ನಡೆಯುವ ಬದಲು 5735 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಯಲಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್​​ಗೆ ಸೇನಾಪುರ ಗ್ರಾಮ ಸೇರ್ಪಡೆ ಪ್ರಶ್ನಿಸಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲಾಗಿದೆ. ಇದರ ವಿಚಾರಣೆ ನಡೆಯುತ್ತಿರುವ ಕಾರಣ ಹೊಸಾಡು ಗ್ರಾಮ ಪಂಚಾಯಯತ್​​ಅನ್ನು ಚುನಾವಣೆಯಿಂದ ಕೈ ಬಿಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಚುನಾವಣೆಯಿಂದ ಕೈಬಿಟ್ಟಿರುವ ಗ್ರಾಮ ಪಂಚಾಯತ್​ಗಳು:

ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿ, ಚಿಕ್ಕಬಾಣವಾರ, ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ, ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಯರಗಟ್ಟಿ, ಅಥಣಿ ತಾಲೂಕಿನ ಕಾಗವಾಡ, ಬೆಳಗಾವಿ ತಾಲೂಕಿನ ಮಚ್ಚೆ ಮತ್ತು ಪೀರನವಾಡಿ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ, ಹರಿಹರ ತಾಲೂಕಿನ ಗುತ್ತೂರು, ಕೋಲಾರ ತಾಲೂಕಿನ ವೇಮಗಲ್, ಕುರುಗಲ್, ಶೆಟ್ಟಿಹಳ್ಳಿ, ಚೌಡದೇವನಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ, ಮನ್ನಬೆಟ್ಟು, ಕಟೀಲು (ಕೊಂಡೆ ಮೂಲ), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ (ಗುಳದಕೇರಿ), ಮಂಕಿ-ಎ (ಹಳೆಮರ), ಮಂಕಿ-ಬಿ(ಅನಂತವಾಡಿ), ಮಂಕಿ-ಸಿ(ಚಿತ್ತಾರ) ಸೇರಿವೆ.

ಒಂದೇ ಹಂತದಲ್ಲಿ ಚುನಾವಣೆ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಡಿಸೆಂಬರ್ 27ರಿಂದ 29ರವರೆಗೆ ದತ್ತ ಜಯಂತಿ ನಡೆಯಲಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಎರಡು ಹಂತದ ಬದಲು ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಡಿ. 22ರಂದು ಒಂದೇ ಹಂತದಲ್ಲಿ 209 ಗ್ರಾಮ ಪಂಚಾಯತ್​​ಗಳಿಗೆ ಚುನಾವಣೆ ನಡೆಯಲಿದೆ. ಈ ಮೊದಲು ಮೊದಲ ಹಂತದಲ್ಲಿ 97 ಮತ್ತು ಎರಡನೇ ಹಂತದಲ್ಲಿ 112 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಆಯೋಗದ ಘೋಷಣೆ

ABOUT THE AUTHOR

...view details