ಬೆಂಗಳೂರು:ಕೋವಿಡ್ ಸೋಂಕಿನ ಮೂರನೇ ಅಲೆ ಬಿಎಂಟಿಸಿ ಸಿಬ್ಬಂದಿಗೂ ತೀವ್ರವಾಗಿ ಕಾಡುತ್ತಿದ್ದು, ಸೋಂಕು ತಗುಲಿರುವ ನೂರಾರು ಮಂದಿ ಸಿಬ್ಬಂದಿ ಮನೆಗಳಲ್ಲಿಯೇ ಐಸೋಲೇಷನ್ಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಎಂಟಿಸಿ ಎಂ.ಡಿ ಅನ್ಬುಕುಮಾರ್ ಮಾಹಿತಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರು, ನಿರ್ವಾಹಕರು, ಮೆಕಾನಿಕ್ಗಳು ಸೇರಿದಂತೆ 163 ಮಂದಿಗೆ ಕೊರೋನಾ ದೃಢಪಟ್ಟಿದೆ. ಎಲ್ಲ ಸಿಬ್ಬಂದಿಯೂ ಸರ್ಕಾರದ ಮಾರ್ಗಸೂಚಿಗಳನ್ವಯ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿಎಂಟಿಸಿ ಎಂ.ಡಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
ಓದಿ:ಜಲ್ಲಿಕಟ್ಟು ಸ್ಪರ್ಧೆ ವೇಳೆ ಗೂಳಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ! VIDEO
ಕೋವಿಡ್ ಸೋಂಕಿತ ಎಲ್ಲ ಸಿಬ್ಬಂದಿಗೂ ವೇತನ ಸಹಿತ 8 ದಿನಗಳ ಕಾಲ ರಜೆ ಮಂಜೂರು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಿಬ್ಬಂದಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ಕುರಿತು ಕಾಲ ಕಾಲಕ್ಕೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ನಮ್ಮ ಮೆಟ್ರೋದ 820 ಸಿಬ್ಬಂದಿಗೆ ಟೆಸ್ಟ್:
ನಮ್ಮ ಮೆಟ್ರೋ ರೈಲಿನ ಒಟ್ಟು 101 ಮಂದಿ ಸಿಬ್ಬಂದಿಗೆ ಬುಧವಾರ ಕೊರೊನಾ ಸೋಂಕು ತಗಲಿರುವುದು ವರದಿಯಾಗಿದೆ. ಮೆಟ್ರೋದಲ್ಲಿ ಸೇವೆ ಸಲ್ಲಿಸುತ್ತಿರುವ 820 ಸಿಬ್ಬಂದಿಗೆ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು. ಅವರಲ್ಲಿ ಈವರೆಗೆ 101 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.