ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ 13 ಜನರು, ದೇವನಹಳ್ಳಿ ತಾಲ್ಲೂಕಿನಲ್ಲಿ 7 ಜನರು ಹಾಗೂ ಅನ್ಯ ಜಿಲ್ಲೆಗಳ 6 ಜನರು ಸೇರಿದಂತೆ ಒಟ್ಟು ಇಪ್ಪತ್ತಾರು ಜನರಲ್ಲಿ ಇಂದು ಕೋವಿಡ್-19 ದೃಢಪಟ್ಟಿದೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಓರ್ವ ವ್ಯಕ್ತಿ ನಿಧನರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಹೊಸಕೋಟೆ ನಗರದ ನಿವಾಸಿಗಳಾದ ಪಿ-11967, ಪಿ-11968, ಪಿ-11969, ಪಿ-11970, ಪಿ-11971, ಪಿ-11972, ಪಿ-11973, ಪಿ-11974, ಪಿ-11975, ಪಿ-11976, ಪಿ-11977, ಪಿ-11978, ಹಾಗೂ ಪಿ-11979 ಸೇರಿದಂತೆ ಒಟ್ಟು 13 ಜನರು ಕೊರೊನಾ ಸೋಂಕಿತ ವ್ಯಕ್ತಿಯ(ಪಿ-10403 ಹಾಗೂ 10404) ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ನಿವಾಸಿಗಳಾದ ಪಿ-11980, ಪಿ-11981, ಪಿ-11982, ಪಿ-11983, ಪಿ-11984 ಹಾಗೂ ಪಿ-11985 ಸೇರಿದಂತೆ ಒಟ್ಟು 5 ಜನರು ಕೊರೊನಾ ಸೋಂಕಿತ ವ್ಯಕ್ತಿಯ(ಪಿ-9229) ಪ್ರಾಥಮಿಕ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.
ಇನ್ನು ರಾಜ್ಯದ ವಿವಿಧ ಜಿಲ್ಲೆಯ ನಿವಾಸಿಗಳಾದ ಪಿ-11986, ಪಿ-11987, ಪಿ-11988, ಪಿ-11989, ಪಿ-11990 ಹಾಗೂ ಪಿ-11991 ಸೇರಿದಂತೆ ಒಟ್ಟು 6 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಇವರನ್ನು ಜಿಲ್ಲೆಗೆ ಆಗಮಿಸಿದ ದಿನದಿಂದ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ.
ದೊಡ್ಡಬಳ್ಳಾಪುರದ ರಾಜೀವ್ ಗಾಂಧಿ ಕಾಲೋನಿಯ ನಿವಾಸಿಯಾದ 65 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯು (ಪಿ-11993) ತೀವ್ರ ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ನಿಧನ ಹೊಂದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.