ಬೆಂಗಳೂರು: 50 ಲಕ್ಷ ಸದಸ್ಯರ ನೋಂದಣಿ ಗುರಿಯೊಂದಿಗೆ ಆರಂಭಿಸಲಾಗಿರುವ ಬಿಜೆಪಿ ಸದಸ್ಯತ್ವ ಅಭಿಯಾನದಡಿ ಈಗಾಗಲೇ 26 ಲಕ್ಷ ಸದಸ್ಯರ ನೋಂದಣಿಯಾಗಿದ್ದು ಸೆಪ್ಟೆಂಬರ್ 10ರ ಒಳಗೆ ನಮ್ಮ ಗುರಿ ತಲುಪಲಿದ್ದೇವೆ ಎಂದು ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕ ರವಿಕುಮಾರ್ ಹೇಳಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ಸೆಪ್ಟಂಬರ್ 10 ರವರೆಗೆ ಅಭಿಯಾನ ನಡೆಸಲಿದ್ದೇವೆ. ಸದಸ್ಯತ್ವ ಅಭಿಯಾನದ ಜೊತೆ ಜೊತೆಯಲ್ಲಿಯೇ ಯಾರಿಗೆ ಪಕ್ಷದಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಅಂತ ಇದೆಯೋ, ಅದು ಬೂತ್ ಅಧ್ಯಕ್ಷರಿಂದ ಹಿಡಿದು ರಾಜ್ಯದ ಪದಾಧಿಕಾರಿಗಳವರೆಗೆ ಅವರು ಸಕ್ರಿಯ ಸದಸ್ಯರಾಗಿರಬೇಕು. ಸಕ್ರಿಯ ಸದಸ್ಯರಾಗಿ ಇರುವಂತಹವರು ಕನಿಷ್ಠ 25 ಪದಾಧಿಕಾರಿಗಳನ್ನು ಮಾಡಬೇಕು ಎಂದರು.