ಬೆಂಗಳೂರು: ರಾಜ್ಯದ ಕೊರೊನಾ ಪ್ರಕರಣಗಳು ಕಡಿಮೆಯಾಗ್ತಿದೆ ಅಂದುಕೊಳ್ಳುವಷ್ಟರಲ್ಲೇ ಮತ್ತೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡಿದೆ. ರಾಜ್ಯದಲ್ಲಿ ನಿನ್ನೆ 2,584 ಸೋಂಕಿತರು ಪತ್ತೆಯಾಗಿದ್ದು, 23 ಮಂದಿ ಕೊನೆಯುಸಿರೆಳೆದಿದ್ದಾರೆ.
ರಾಜ್ಯದಲ್ಲಿ ಬುಧವಾರ 2,584 ಕೊರೊನಾ ಸೋಂಕಿತರು ಪತ್ತೆ: 23 ಬಲಿ - karnataka corona cases
ರಾಜ್ಯದಲ್ಲಿ ನಿನ್ನೆ 2,584 ಸೋಂಕಿತರು ಪತ್ತೆಯಾಗಿದ್ದು, 23 ಮಂದಿ ಬಲಿಯಾಗಿದ್ದಾರೆ.
![ರಾಜ್ಯದಲ್ಲಿ ಬುಧವಾರ 2,584 ಕೊರೊನಾ ಸೋಂಕಿತರು ಪತ್ತೆ: 23 ಬಲಿ 2,584 covid cases found yesterdays](https://etvbharatimages.akamaized.net/etvbharat/prod-images/768-512-9518303-thumbnail-3x2-corona.jpg)
ರಾಜ್ಯದಲ್ಲಿ ನಿನ್ನೆ 2,584 ಕೊರೊನಾ ಸೋಂಕಿತರು ಪತ್ತೆ....23 ಬಲಿ!
ಸೋಮವಾರ 1,963 ಹಾಗೂ ಮಂಗಳವಾರದಂದು 2,362 ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಆದ್ರೆ ಬುಧವಾರದಂದು 2,584 ಮಂದಿಗೆ ಕೊರೊನಾ ದೃಢಪಟ್ಟಿದೆ.
ಕಳೆದ 24 ಗಂಟೆಯಲ್ಲಿ ಕೇವಲ 2,881 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಬಳ್ಳಾರಿ- 41, ಬೆಳಗಾವಿ- 28, ಬೆಂಗಳೂರು ಗ್ರಾಮಾಂತರ- 48, ಚಿಕ್ಕಮಗಳೂರು-ಚಿತ್ರದುರ್ಗ- 55, ದಕ್ಷಿಣ ಕನ್ನಡ- 63, ಹಾಸನ-ತುಮಕೂರು- 59, ವಿಜಯಪುರ- 33 ಸೋಂಕು ಪ್ರಕರಣಗಳು ವರದಿಯಾಗಿದ್ದು, ಇವು ಅತಿಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳಾಗಿವೆ.