ಕರ್ನಾಟಕ

karnataka

ETV Bharat / state

ಕೊರೊನಾ ಅಟ್ಟಹಾಸ: ರಾಜಧಾನಿಯ 2544 ಮಂದಿಗೆ ಸೋಂಕು...15 ಬಲಿ! - Bangalore corona case

ದೇಶದೆಲ್ಲೆಡೆ ತಲ್ಲಣ ಮೂಡಿಸಿರುವ ಮಹಾಮಾರಿ ಕೊರೊನಾ ರಾಜಧಾನಿಯ 15 ಮಂದಿಯನ್ನು ಬಲಿ ತೆಗೆದುಕೊಂಡಿದೆ ಮತ್ತು 2544 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 67,425ಕ್ಕೆ ಏರಿಕೆಯಾಗಿದೆ.

Bangalore corona case
Bangalore corona case

By

Published : Aug 6, 2020, 11:08 PM IST

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 2544 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ ಹಾಗು 15 ಮಂದಿ ಮೃಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 67,425ಕ್ಕೆ ಏರಿಕೆಯಾಗಿದೆ.

2544 ಪಾಸಿಟಿವ್ ಪ್ರಕರಣಗಳ ಪೈಕಿ, ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 634 ಪಾಸಿಟಿವ್ ಪ್ರಕರಣ, ಪೂರ್ವದಲ್ಲಿ 392, ಬೊಮ್ಮನಹಳ್ಳಿಯಲ್ಲಿ 390 ಪಾಸಿಟಿವ್, ದಕ್ಷಿಣದಲ್ಲಿ 343, ಮಹದೇವಪುರದಲ್ಲಿ 148 ಪಾಸಿಟಿವ್, ಆರ್ ಆರ್ ನಗರದಲ್ಲಿ 180, ದಾಸರಹಳ್ಳಿಯಲ್ಲಿ 136, ಯಲಹಂಕದಲ್ಲಿ 117 ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಸದ್ಯ ಕಟೈನ್ಮೆಂಟ್ ವಲಯಗಳ ಸಂಖ್ಯೆ 26,339ರಷ್ಟಾಗಿದೆ.

2972 ಮಂದಿ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದು, ಒಟ್ಟು 33932 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 32,314 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇಂದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಈವರೆಗೆ 1178 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಗರದ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 17.81 ಇದೆ. ಜೂನ್ ಅಂತ್ಯದವರೆಗೆ 4555 ಇದ್ದ ಕೊರೊನಾ ಪ್ರಕರಣ, ಜುಲೈ ಅಂತ್ಯದ ವೇಳೆಗೆ 52,106ಕ್ಕೆ ಏರಿಕೆಯಾಗಿದೆ. ಜುಲೈ 19 ರವರೆಗೆ 34,943 ರಷ್ಟಿದ್ದ ಪ್ರಕರಣದ ಪ್ರಮಾಣ ಜುಲೈ 20 ರಿಂದ ಏಕಾಏಕಿ ಏರಿಕೆಯಾಗಿದ್ದು ಸದ್ಯ 67,425ಕ್ಕೆ ತಲುಪಿದೆ. ನಗರದ 198 ವಾರ್ಡ್ ಗಳ ಪೈಕಿ, 174 ವಾರ್ಡ್ ಗಳಲ್ಲಿ ಕೊರೊನಾ ತೀವ್ರತೆ ಇದೆ.

ABOUT THE AUTHOR

...view details