ಬೆಂಗಳೂರು: ರಾಜ್ಯದಲ್ಲಿಂದು 1,57,552 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಇದರಲ್ಲಿ 2,530 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,64,868ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ ಶೇ 1.60 ರಷ್ಟಿದೆ.
ರಾಜ್ಯದಲ್ಲಿಂದು ಹೊಸ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹೆಚ್ಚು: ಪಾಸಿಟಿವಿಟಿ ದರ ಶೇ 1.60 - ಕೊರೊನಾ ವೈರಸ್
ರಾಜ್ಯದಲ್ಲಿ ಇಂದು ವರದಿಯಾದ ಕೋವಿಡ್ ಪ್ರಕರಣಗಳ ಸಂಪೂರ್ಣ ವಿವರ ಇಲ್ಲಿದೆ.
ಕೊರೊನಾಗೆ ಬಲಿ
ಇನ್ನು 3,344 ಸೋಂಕಿತರು ಗುಣಮುಖರಾಗಿದ್ದು, ಈ ತನಕ 27,90,453 ಜನರು ಚೇತರಿಕೆ ಕಂಡು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 38,729 ರಷ್ಟಿವೆ. ಇಂದು 62 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಕೊರೊನಾದಿಂದ ಸತ್ತವರ ಸಂಖ್ಯೆ 35,663ಕ್ಕೆ ಏರಿದೆ. ಸಾವಿನ ಶೇಕಡಾವಾರು ಪ್ರಮಾಣ 2.45 ಇದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ 1,137 ಜನರು ಬಂದಿದ್ದು, ಯುಕೆಯಿಂದ 16 ಪ್ರಯಾಣಿಕರು ಆಗಮಿಸಿದ್ದಾರೆ.