ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 253 ಮಂದಿಗೆ ಕೊರೊನಾ ಸೋಂಕು: ಸಾವು ಶೂನ್ಯ - ಕರ್ನಾಟಕ ಕೊರೊನಾ ಸೋಂಕು ಪ್ರಕರಣ

ರಾಜ್ಯದಲ್ಲಿ ಕೊರೊನಾ 4,822 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಪ್ರಮಾಣ ಶೇ. 3.71, ವಾರದ ಸೋಂಕಿತರ ಪ್ರಮಾಣ ಶೇ. 3.84 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.03 ಇದೆ.

253-people-tested-covid-positive-in-karnataka
ರಾಜ್ಯದಲ್ಲಿಂದು 253 ಕೊರೊನಾ ಸೋಂಕು: ಸಾವು ಶೂನ್ಯ

By

Published : Jun 25, 2022, 10:55 PM IST

ಬೆಂಗಳೂರು:ರಾಜ್ಯದಲ್ಲಿ ಶನಿವಾರ 6,805 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 253 ಜನರಿಗೆ ಸೋಂಕು ದೃಢಪಟ್ಟಿದೆ. 611 ಮಂದಿ ವೈರಸ್​ನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಸಾವಿನ ಸಂಖ್ಯೆ ಶೂನ್ಯ ದಾಖಲಾಗಿದೆ.

ಸದ್ಯ 4,822 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಪ್ರಮಾಣ ಶೇ. 3.71, ವಾರದ ಸೋಂಕಿತರ ಪ್ರಮಾಣ ಶೇ. 3.84 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.03 ಇದೆ. ವಿಮಾನ ನಿಲ್ದಾಣದಿಂದ 5,370 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 236 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,99,692ಕ್ಕೆ ಏರಿಕೆ ಆಗಿದೆ. ಇಂದು 598 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ 16,967 ಕೋವಿಡ್​ನಿಂದ ಮೃತರಾಗಿದ್ದು, ರಾಜಧಾನಿಯಲ್ಲಿ 4,567 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ನಿನ್ನೆಗಿಂತ ಕೊಂಚ ಇಳಿಕೆ ಕಂಡ ಕೊರೊನಾ: ಆದರೆ 90 ಸಾವಿರದ ಗಡಿದಾಟಿದ ಸಕ್ರಿಯ ಪ್ರಕರಣಗಳು!

ABOUT THE AUTHOR

...view details