ಬೆಂಗಳೂರು : ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಖಾಸಗಿ ಬಸ್, ಮಾಕ್ಸಿ ಕ್ಯಾಬ್ಗಳ ವಿರುದ್ಧ ಸಾರಿಗೆ ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿದೆ.
ಗುರುವಾರ ಒಂದೇ ದಿನ ನಗರದ ಹೆಬ್ಬಾಳ, ನಾಗಾವರ, ಇಂದಿರಾನಗರ, ಕೆ.ಆರ್.ಪುರ ಮತ್ತು ಗುರಗುಂಟೆಪಾಳ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ 40 ಬಸ್, 60 ಮಾಕ್ಸಿ ಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ151 ವಾಹನಗಳು ಸೇರಿದಂತೆ ಒಟ್ಟು 251 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.