ಕರ್ನಾಟಕ

karnataka

ETV Bharat / state

500 ರೂ. ಆಸೆಗೆ ತಮಿಳುನಾಡಿನಿಂದ ವಲಸೆ ಕಾರ್ಮಿಕರನ್ನು ಬೆಂಗಳೂರಿಗೆ ಕರೆತಂದ ಟ್ರಕ್​ ಚಾಲಕ: ತನಿಖೆ ಚುರುಕು - ವಲಸೆ ಕಾರ್ಮಿಕರ ನ್ಯೂಸ್

ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಕದ್ದು ಮುಚ್ಚಿ, ಇಂದಿರಾನಗರ ಎಚ್.ಎ.ಎಲ್ ಮೂರನೇ ಹಂತಕ್ಕೆ 25 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಬಂದಿಳಿದಿದ್ದಾರೆ.

Workers
Workers

By

Published : Jun 5, 2020, 9:47 AM IST

ಬೆಂಗಳೂರು: ಲಾಕ್​ಡೌನ್​ ನಿಯಮ ಮೀರಿ ತಮಿಳುನಾಡಿನಿಂದ ಟ್ರಕ್ ಗಳಲ್ಲಿ ಕದ್ದು ಮುಚ್ಚಿ, ಇಂದಿರಾನಗರ ಎಚ್.ಎ.ಎಲ್ ಮೂರನೇ ಹಂತಕ್ಕೆ 25 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಬಂದಿಳಿದಿದ್ದಾರೆ.

ಟ್ರಕ್ ಚಾಲಕ 500 ರೂ.ಹಣ ಪಡೆದು ವಲಸೆ ಕಾರ್ಮಿಕರನ್ನು ಕರೆತಂದುಬಿಟ್ಟು ಪರಾರಿಯಾಗಿದ್ದಾನೆ. ಸದ್ಯಕ್ಕೆ ಚಾಲಕ ವಲಸೆ ಕಾರ್ಮಿಕರನ್ನು ಕರೆತಂದು ಬಿಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿರುವುದನ್ನು ಕಂಡು ಕೆಲವರು ಆತಂಕಗೊಡಿದ್ದಾರೆ.

ಇನ್ನು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೆ ವಲಸೆ ಕಾರ್ಮಿಕರು ಆಗಮಿಸಿದ್ದು, ಸದ್ಯ ಇಂದಿರಾನಗರ ಠಾಣೆ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details