ಕರ್ನಾಟಕ

karnataka

ETV Bharat / state

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೂವರು ಉದ್ಯೋಗಾಂಕ್ಷಿಗಳಿಗೆ ₹25 ಲಕ್ಷ ದೋಖಾ - Mallikarjun Biradar, Ningaraj Athanoor

ಹಣ ಕೇಳಿದ್ದಕ್ಕೆ ಮೂವರಿಗೆ ಕೆಲಸ ಕೊಡಿಸಲು ಒಟ್ಟು 25 ಲಕ್ಷ ರೂ. ಕೊಡಬೇಕು ಎಂದು ಆರೋಪಿಗಳು ತಿಳಿಸಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಬಸವರಾಜ್ ಹಾಗೂ ಆತನ ಸ್ನೇಹಿತರು ಮುಂಗಡವಾಗಿ 5 ಲಕ್ಷ ರೂ. ಕೊಟ್ಟಿದ್ದರು. ಉಳಿದ 20 ಲಕ್ಷ ರೂ. ದೂರುದಾರರು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು..

25-lakhs-fruad-by-accused-in-bengalore
ಬಸವೇಶ್ವರನಗರ ಠಾಣೆ

By

Published : Feb 23, 2021, 10:55 PM IST

ಬೆಂಗಳೂರು :ಅಬಕಾರಿ ಉಪನಿರೀಕ್ಷಕ (ಎಸ್‌ಐ) ಹುದ್ದೆ ಕೊಡಿಸುವುದಾಗಿ ನಂಬಿಸಿ ಮೂವರಿಂದ 25 ಲಕ್ಷ ರೂ. ಪಡೆದುಕೊಂಡ ಆರೋಪಿಗಳು ಕೆಲಸವನ್ನೂ ಕೊಡಿಸದೇ, ಹಣವನ್ನೂ ಮರಳಿಸದೆ ವಂಚಿಸಿದ್ದಾರೆ.

ಬಸವೇಶ್ವರನಗರದ ನಿವಾಸಿ ಬಸವರಾಜ್ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ಮಲ್ಲಿಕಾರ್ಜುನ್ ಬಿರಾದಾರ್, ನಿಂಗರಾಜ್ ಅತನೂರು ಹಾಗೂ ಮಾದೇಶ್ ಎಂಬುವರ ವಿರುದ್ಧ ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸವರಾಜ್‌ಗೆ ಪರಿಚಿತರ ಮೂಲಕ ಕೆಲ ವರ್ಷಗಳ ಹಿಂದೆ ಆರೋಪಿ ಮಲ್ಲಿಕಾರ್ಜುನ್ ಪರಿಚಯವಾಗಿದ್ದ. ಹಣ ಕೊಟ್ಟರೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. ಪದೇಪದೆ ಕರೆ ಮಾಡಿ ಹಣ ಕೊಡದೆ ಹೋದರೆ ಸರ್ಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಹೇಳುತ್ತಿದ್ದ.

ನನ್ನ ಅಣ್ಣ ನಿಂಗರಾಜ್ ಅತನೂರ್​ಗೆ ಬೆಂಗಳೂರಿನಲ್ಲಿ ಹಲವು ಐಪಿಎಸ್ ಹಾಗೂ ಕೆಎಸ್‌ಪಿಸಿ ಅಧಿಕಾರಿಗಳು ಪರಿಚಯವಿದ್ದು, ಅವರೇ ನಿಮಗೆ ಕೆಲಸ ಕೊಡಿಸುತ್ತಾರೆ ಎಂದು ನಂಬಿಸಿದ್ದ. ಮಲ್ಲಿಕಾರ್ಜುನ್ ಹಾಗೂ ಆತನ ಅಣ್ಣ ದೂರುದಾರ ಬಸವರಾಜ್‌ನ ಭೇಟಿಯಾಗಿ 2019ರಲ್ಲಿ ಕೆಎಸ್‌ಪಿಸಿಯಲ್ಲಿ ಕರೆಯಲಾದ ಅಬಕಾರಿ ಉಪ ನಿರೀಕ್ಷಕ ಹುದ್ದೆಗೆ ಹಣ ನೀಡಿದರೆ ಕೆಲಸ ಮಾಡಿಸಿಕೊಡುತ್ತೇವೆ ಎಂದು ನಂಬಿಸಿದ್ದರು.

ಇದನ್ನು ನಂಬಿದ ಬಸವರಾಜ್ ತನ್ನ ಸ್ನೇಹಿತರಾದ ಈರಪ್ಪ, ಮಲ್ಲಕ್ಕನವರ್ ಜತೆ ಬಸವೇಶ್ವರನಗರದ ಖಾಸಗಿ ಹೋಟೆಲ್‌ವೊಂದರಲ್ಲಿ 2019ರ ಫೆ.10ರಂದು ಆರೋಪಿಗಳನ್ನು ಭೇಟಿಯಾಗಿದ್ದರು. ಮಲ್ಲಿಕಾರ್ಜುನ್ ಜತೆ ಬಂದಿದ್ದ ಮಾದೇಶ್ ಎಂಬಾತ ತನ್ನನ್ನು ಐಪಿಎಸ್ ಅಧಿಕಾರಿ ಎಂದು ದೂರುದಾರರಿಗೆ ಪರಿಚಯಿಸಿಕೊಂಡು ನಂಬಿಕೆ ಗಿಟ್ಟಿಸಿದ್ದ.

ಓದಿ:ಖಾದಿ ಬಟ್ಟೆ ಉತ್ತೇಜನಕ್ಕೆ ಆನ್​ಲೈನ್ ಟಚ್​​... ಇನ್ಮುಂದೆ ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲೂ ಲಭ್ಯ!

ಹಣ ಕೇಳಿದ್ದಕ್ಕೆ ಮೂವರಿಗೆ ಕೆಲಸ ಕೊಡಿಸಲು ಒಟ್ಟು 25 ಲಕ್ಷ ರೂ. ಕೊಡಬೇಕು ಎಂದು ಆರೋಪಿಗಳು ತಿಳಿಸಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಬಸವರಾಜ್ ಹಾಗೂ ಆತನ ಸ್ನೇಹಿತರು ಮುಂಗಡವಾಗಿ 5 ಲಕ್ಷ ರೂ. ಕೊಟ್ಟಿದ್ದರು. ಉಳಿದ 20 ಲಕ್ಷ ರೂ. ದೂರುದಾರರು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.

2020ರಲ್ಲಿ ಕೆಎಸ್‌ಪಿಸಿ ಹುದ್ದೆಗೆ ಪರೀಕ್ಷೆ ಬರೆದವರ ಫಲಿತಾಂಶಗಳು ಬಂದಿವೆ. ಇದರಲ್ಲಿ ಬಸವರಾಜ್ ಹಾಗೂ ಅವರ ಸ್ನೇಹಿತರ ಹೆಸರು ಇರಲಿಲ್ಲ. ಅನುಮಾನಗೊಂಡು ಆರೋಪಿಗಳ ಊರಿಗೆ ಹೋಗಿ ಹಣ ಮರಳಿಸುವಂತೆ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಬೆದರಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details