ಬೆಂಗಳೂರು:ವ್ಯಾಕ್ಸಿನ್ ಆರಂಭವಾದ ಜನವರಿ 16 ರಿಂದ ಇಲ್ಲಿಯವರೆಗೂ 25,86,550 ಡೋಸ್ ಲಸಿಕೆ ಬಂದಿದೆ. ಈ ಪೈಕಿ ಕೋವ್ಯಾಕ್ಸಿನ್ ಎರಡು ಲಕ್ಷ ಬಂದಿದೆ.
45 ವರ್ಷ ಮೇಲ್ಪಟ್ಟವರಾಗಿದ್ರೆ ಯಾವುದೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗಲಿದೆ. ಆದ್ರೆ 45 ವರ್ಷ ಕೆಳಗಿನವರಲ್ಲಿ ಆಯ್ದ ಗುಂಪುಗಳಿಗೆ ಮಾತ್ರ ಕೊಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇರುವಲ್ಲಿ ಕೊಡಬಹುದು. ಕೋವ್ಯಾಕ್ಸಿನ್ ಮಾತ್ರ ಎರಡನೇ ಡೋಸ್ಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗ್ತಿದೆ ಎಂಬ ಆರೋಪ ಇದ್ದು, ಸರ್ಕಾರದ ನಿಯಮ ಮೀರಿ ಹೆಚ್ಚಿನ ದರಕ್ಕೆ ವ್ಯಾಕ್ಸಿನ್ ಕೊಟ್ಟರೆ ಕ್ರಮ ಕೈಗೊಳ್ಳಲಾಗ್ತದೆ. ಲಸಿಕೆಗಳನ್ನು ದಿನಕ್ಕೆ 45 ವರ್ಷ ಮೇಲ್ಪಟ್ಟವರಿಗೆ 25 ಸಾವಿರ ಜನರಿಗೆ, 18-44 ವರ್ಷದವರಿಗೆ 20 ರಿಂದ 25 ಸಾವಿರ ಜನರಿಗೆ ಕೊಡುತ್ತಿದ್ದೇವೆ ಎಂದರು.
ಇನ್ನು ನಗರದಲ್ಲಿ ವ್ಯಾಕ್ಸಿನೇಶನ್ ಡ್ರೈವ್ ದಿನದಿಂದ ದಿನಕ್ಕೆ ಹೆಚ್ಚಳ ಆಗ್ತಿದೆ. ಸರ್ಕಾರ ಸೂಚಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡುತ್ತಿರುವುದರಿಂದ ಕಳೆದ ಮೂರು ದಿನಗಳಿಂದ ನಗರದಲ್ಲಿ ವ್ಯಾಕ್ಸಿನೇಶನ್ಗೆ ವೇಗ ಸಿಕ್ಕಿದೆ.