ಬೆಂಗಳೂರು: ಬಿಬಿಎಂಪಿ ಎಆರ್‌ಒ ಪತ್ನಿಗೂ ಕೊರೊನಾ ಕಾಣಿಸಿಕೊಂಡಿದೆ. ಬೆಂಗಳೂರಿನ ಶ್ರೀರಾಂಪುರ ನಿವಾಸಿಯಾಗಿರುವ ಈಕೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೆಚ್‌ಸಿಜಿ ಆಸ್ಪತ್ರೆಗೆ ಕಿಮೋಥೆರಪಿ, ರೇಡಿಯೇಷನ್ ಥೆರಪಿ ಸಲುವಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಈ ಸಮಯದಲ್ಲಿ ಗಂಟಲ ದ್ರವ ತೆಗೆದು ಟೆಸ್ಟ್ ಮಾಡಿದಾಗ ಸೋಂಕು ದೃಢಪಟ್ಟಿದೆ.
ಬಿಬಿಎಂಪಿ ಎಆರ್‌ಒ ಪತ್ನಿಗೂ ಕೊರೊನಾ: ಪಾಲಿಕೆ ವ್ಯಾಪ್ತಿಯಲ್ಲಿ 25 ಕಂಟೇನ್ಮೆಂಟ್ ಝೋನ್ - Bangalore 25 Containment Zone News
ಬೆಂಗಳೂರಿನ ಶ್ರೀರಾಂಪುರ ನಿವಾಸಿಯಾಗಿರುವ ಈ ಮಹಿಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೆಚ್‌ಸಿಜಿ ಆಸ್ಪತ್ರೆಗೆ ಕಿಮೋಥೆರಪಿ, ರೇಡಿಯೇಷನ್ ಥೆರಪಿ ಸಲುವಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಈ ಸಮಯದಲ್ಲಿ ಗಂಟಲಿನ ದ್ರವ ತೆಗೆದು ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 25 ಕಂಟೈನ್ಮೆಂಟ್ ಜೋನ್..
ಪಾಲಿಕೆ ವ್ಯಾಪ್ತಿಯಲ್ಲಿ 25 ಪ್ರದೇಶ ಕಂಟೇನ್ಮೆಂಟ್ ಝೋನ್:
ಕಂಟೇನ್ಮೆಂಟ್ ವಲಯಗಳಿಗೆ ಮಾತ್ರ 5ನೇ ಹಂತದ ವಿನಾಯಿತಿ ಇಲ್ಲ. ಬೆಂಗಳೂರಿನ 25 ಪ್ರದೇಶಗಳಲ್ಲಿ ನಿರ್ಬಂಧಿತ ಪ್ರದೇಶಗಳು ಜಾರಿಯಲ್ಲಿವೆ. ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು ವಲಯಗಳಿವೆ.
- ಪಶ್ಚಿಮ ವಲಯ : ಮಲ್ಲೇಶ್ವರಂ, ಪಾದರಾಯನಪುರ, ಕೆ.ಆರ್.ಮಾರುಕಟ್ಟೆ, ಜೆ.ಜೆ.ನಗರ, ಮಾರಪ್ಪನಪಾಳ್ಯ, ಅಗ್ರಹಾರ, ದಾಸರಹಳ್ಳಿ.
- ಪೂರ್ವ ವಲಯ: ಹೆಚ್‌ಬಿಆರ್ ಲೇಔಟ್, ಶಿವಾಜಿನಗರ, ವಸಂತನಗರ, ವನ್ನಾರ್ ಪೇಟೆ, ಎಸ್.ಕೆ. ಗಾರ್ಡನ್
- ಮಹದೇವಪುರ ವಲಯ : ಹಗದೂರು, ಹೂಡಿ, ವರ್ತೂರು, ರಾಮಮೂರ್ತಿನಗರ, ಮಾರತ್ತ ಹಳ್ಳಿ
- ಬೊಮ್ಮನಹಳ್ಳಿ ವಲಯ : ಹೊಂಗಸಂದ್ರ, ಬೇಗೂರು, ಮಂಗಮ್ಮನಪಾಳ್ಯ, ಪುಟ್ಟೇನಹಳ್ಳಿ
- ದಕ್ಷಿಣ ವಲಯ : ಬಿಟಿಎಂ ಲೇಔಟ್, ಲಕ್ಕಸಂದ್ರ, ರಾಜರಾಜೇಶ್ವರಿ ನಗರ, ಹೇರೋಹಳ್ಳಿ ಹಾಗೂ ಜ್ಞಾನ ಭಾರತಿನಗರ.