ಬೆಂಗಳೂರು: ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ನಾಗಮೋಹನ್ ಸಮಿತಿ ವರದಿ ಹಿನ್ನೆಲೆಯಲ್ಲಿ 25 ತಪ್ಪಿತಸ್ಥ 25 ಅಭಿಯಂತರರನ್ನು ಬಿಬಿಎಂಪಿ ತನ್ನ ಸೇವೆಯಿಂದ ಬಿಡುಗಡೆ ಮಾಡಿದೆ ಎಂದು ಆಯುಕ್ತರಾದ ಬಿಎಚ್ ಅನಿಲ್ಕುಮಾರ್ ಹೇಳಿದ್ದಾರೆ. ಈ ಸಂಬಂಧ ಅವರು ಆದೇಶ ಸಹ ಹೊರಡಿಸಿದ್ದಾರೆ. ಈ ಎಲ್ಲ 25 ಅಧಿಕಾರಿಗಳನ್ನು ನಗರಾಭಿವೃದ್ಧಿ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.
ಗಾಂಧಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ ವಿಭಾಗಗಳ ಕಾಮಗಾರಿಗಳಲ್ಲಿ ಅವ್ಯವಹಾರ, ಅಕ್ರಮ ನಡೆದಿರುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್ ನಾಗಮೋಹನ್ ದಾಸ್ ಸಮಿತಿ ತನಿಖಾ ವರದಿ ನೀಡಿತ್ತು. ಇದರಲ್ಲಿ ಹಾಲಿ ಪಾಲಿಕೆಯ ವಿವಿದ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಗುರುತಿಸಲಾಗಿತ್ತು.