ಕರ್ನಾಟಕ

karnataka

ETV Bharat / state

ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಇವರ ಟಾರ್ಗೆಟ್..... ಸಿಸಿಟಿವಿ ಇದ್ರೂ ಡೋಂಟ್ ಕೇರ್! ಕದ್ದ ಹಣ ಎಷ್ಟು ? - 24 lakh stolen by atm

ರಾತ್ರೋ ರಾತ್ರಿ ಎಟಿಎಂ ಒಡೆದು 24 ಲಕ್ಷ ರೂ.ಕನ್ನ ಹಾಕಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

24 lakh stolen by ATM
ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಈ ಕಳ್ಳರ ಟಾರ್ಗೆಟ್.....ಸಿಸಿಟಿವಿ ಇದ್ರು ಡೋಂಟ್ ಕೇರ್!

By

Published : Jan 18, 2020, 10:16 AM IST

ಬೆಂಗಳೂರು: ಸೆಕ್ಯೂರಿಟಿ ಇಲ್ಲದ‌‌ ಎಟಿಎಂಗಳನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರ ಗ್ಯಾಂಗ್ ರಾತ್ರೋ ರಾತ್ರಿ ಎಟಿಎಂ ಒಡೆದು ಲಕ್ಷಾಂತರ ರೂ.ಕನ್ನ ಹಾಕಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸೂರು ರಸ್ತೆಯಲ್ಲಿರುವ ಪರಪ್ಪನ ಅಗ್ರಹಾರದ ಬಳಿಯ ಕೆನರಾ ಬ್ಯಾಂಕ್ ಬಳಿ ಡಿಸೆಂಬರ್​ನ ಕೊನೆ ವಾರದಲ್ಲಿ ಖದೀಮರು ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ದಿನಗಟ್ಟಲೇ ಕಾದು‌ ಹೊಂಚು ಹಾಕಿದ ಖದೀಮರು ರಾತ್ರಿಯಾಗುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದಾರೆ.

ಸೆಕ್ಯೂರಿಟಿ ಇಲ್ಲದ ಎಟಿಎಂಗಳೇ ಈ ಕಳ್ಳರ ಟಾರ್ಗೆಟ್.....ಸಿಸಿಟಿವಿ ಇದ್ರೂ ಡೋಂಟ್ ಕೇರ್!

ಮುಖಕ್ಕೆ ಹೆಲ್ಮೆಟ್ ಧರಿಸಿ,‌ ಮೈ ತುಂಬಾ ಜರ್ಕಿನ್ ಹಾಕಿಕೊಂಡು ಬರುವ ದರೋಡೆಕೋರರು ಎಟಿಎಂಗೆ ನುಗ್ಗಿ, ಕಬ್ಬಿಣ್ಣದ ರಾಡ್ ಹಾಗೂ ಹಾರೆಯಿಂದ ಎಟಿಎಂ ಯಂತ್ರ ಒಡೆದಿದ್ದಾರೆ. ಈ ವೇಳೆ, ಸಿಸಿಟಿವಿ ಇರುವುದನ್ನು ಕಂಡರೂ ಡೋಂಟ್ ಕೇರ್ ಅಂದಿದ್ದಾರೆ. ಕ್ಷಣ ಮಾತ್ರದಲ್ಲಿ ಎಟಿಎಂನಲ್ಲಿರುವ 24 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಪರಪ್ಪನ‌ ಅಗ್ರಹಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ನಗರದ ಬಹುತೇಕ ಕಡೆಗಳಲ್ಲಿ ಎಟಿಎಂಗಳಲ್ಲಿ ಸೆಕ್ಯೂರಿಟಿ ಇಲ್ಲ. ಕೆಲ ವರ್ಷಗಳ ಹಿಂದೆ ಕಾರ್ಪೊರೇಷನ್ ಬ್ಯಾಂಕ್​ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆಯಾಗಿತ್ತು. ಆ ಕಹಿ ಘಟನೆ ನಂತರ ಬೆಂಗಳೂರಿನಲ್ಲಿ ಎಟಿಎಂಗಳಿಗೆ ಭದ್ರತೆ ಹೆಚ್ಚಿಸಲಾಗಿತ್ತು. ಸ್ವಲ್ಪ ವರ್ಷ ಕಳೆಯುತ್ತಿದ್ದಂತೆ ಮತ್ತೆ ಎಟಿಎಂ ಭದ್ರತೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.

ಯಾವುದೇ ಸೆಕ್ಯೂರಿಟಿ ,ಅಲರಾಮ್, ಸರಿಯಾದ ರೀತಿಯ ಸಿಸಿಟಿವಿ ಅಳವಡಿಸದೇ ನಿರ್ಲಕ್ಷ್ಯ ವಹಿಸಿರೋದೆ ಇದಕ್ಕೆ ಕಾರಣವಾಗಿದೆ. ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 72 ಎಟಿಎಂ ದರೋಡೆ ಪ್ರಕರಣ ದಾಖಲಾಗಿವೆ.

ABOUT THE AUTHOR

...view details