ಬೆಂಗಳೂರು: ವಿವಿಧ ಅಪರಾಧವೆಸಗಿ ಜೈಲು ಸೇರಿರುವ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳ ಪಾಲಿಗೆ ಕೊರೊನಾ ಬಿಕ್ಕಟ್ಟು ವರದಾನವಾಗಿದೆ. ಜೀವಾವಧಿ ಸಜೆಯಿಂದ ಸೆರೆಮನೆಯಲ್ಲಿದ್ದ ಕೈದಿಗಳಿಗೂ ಸಹ ಬಿಡುಗಡೆ ಭಾಗ್ಯ ಕಲ್ಪಿಸಲಾಗುತ್ತಿದೆ.
ಕಳೆದ ಒಂದು ವಾರದಲ್ಲಿ ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಒಟ್ಟು 222 ಮಂದಿ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳು ಬಿಡುಗಡೆಯಾಗಿದ್ದಾರೆ. 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಅನುಭವಿಸಿರುವ 105 ಕೈದಿಗಳು ಬಿಡುಗಡೆಯಾದರೆ, 82 ಮಂದಿ ಸಜಾಬಂಧಿಗಳನ್ನು ಪೆರೋಲ್ ಮೇಲೆ ಬಿಡಲಾಗಿದೆ. 35 ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ರಿಲೀಸ್ ಮಾಡಲಾಗಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆ ಜೈಲುಗಳಲ್ಲಿನ ಸ್ಥಿತಿಗತಿಗಳ ಬಗ್ಗೆ ಕಳೆದ ವರ್ಷ ಮಾ.23 ರಂದು ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದಂತೆ ರಾಜ್ಯ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗಿತ್ತು. ಕಳೆದ ಮೇ 7ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ್ ರೆಡ್ಡಿ ಇರುವ ಏಕ ಸದಸ್ಯ ಪೀಠ ನಿರ್ದೇಶನ ನೀಡಿತ್ತು.
ಕೊಲೆ, ರಾಬರಿ, ಆತ್ಯಾಚಾರ, ಪೊಕ್ಸೊ ಕೇಸ್ ಹೊರತುಪಡಿಸಿ ಕಳ್ಳತನ, ಅಪಹರಣ, ವಂಚನೆ ಸೇರಿದಂತೆ 7 ವರ್ಷಗಳಿಗಿಂತ ಕಡಿಮೆ ಶಿಕ್ಷೆಯಿರುವ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 105 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದ ವಿವಿಧ ಜೈಲುಗಳಲ್ಲೂ ಸಹ ಕೈದಿಗಳ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ.
ಪೆರೋಲ್ ಮೇಲೆ 82 ಕೈದಿಗಳು ರಿಲೀಸ್: