ಬೆಂಗಳೂರು :ರಾಜ್ಯದಲ್ಲಿಂದು 23,644 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 222 ಮಂದಿಗೆ ಸೋಂಕು ದೃಢಪಟ್ಟಿದೆ. 191 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ, ಸದ್ಯ 2,260 ಸಕ್ರಿಯ ಪ್ರಕರಣಗಳಿವೆ.
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.0.93, ವಾರದ ಸೋಂಕಿತರ ಪ್ರಮಾಣ ಶೇ.1.32ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.07 ಇದೆ. ವಿಮಾನ ನಿಲ್ದಾಣದಿಂದ ಇಂದು 5,334 ಮಂದಿಗೆ ತಪಾಸಣೆ ಸೇರಿದಂತೆ ಈವರೆಗೂ 10,06,526 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಗಾಗಿದ್ದಾರೆ.