ಕರ್ನಾಟಕ

karnataka

ETV Bharat / state

2,203 ಮಂದಿಗೆ ಕೋವಿಡ್‌ ಪಾಸಿಟಿವ್​: ಬೆಂಗಳೂರಿನಲ್ಲಿ ತಗ್ಗಿದ ಸೋಂಕು ಹಾವಳಿ - ಕೊರೊನಾ ಸುದ್ದಿ

ಬೆಂಗಳೂರಲ್ಲಿ ಕಠಿಣ ಲಾಕ್​ಡೌನ್ ಜಾರಿಯಾದಾಗಿನಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಸಾವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ.

bangalore-corona
ಬೆಂಗಳೂರು ಕೊರೊನಾ

By

Published : Jun 10, 2021, 1:19 PM IST

ಬೆಂಗಳೂರು: ರಾಜ್ಯ ಸರ್ಕಾರ ಕೊರೊನಾ ಅಟ್ಟಹಾಸ ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಿದಾಗಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇಂದು ನಗರದಲ್ಲಿ ಸೋಂಕಿತರ ಸಂಖ್ಯೆ 2,203ಕ್ಕೆ ಇಳಿಕೆಯಾಗಿದ್ದು, ನಿನ್ನೆ 2,395 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ನಿನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡಿದೆ.

ಬೆಂಗಳೂರಿನ ಕೋವಿಡ್ ಬುಲೆಟಿನ್

ಬೆಂಗಳೂರಲ್ಲಿ ಲಾಕ್​​ಡೌನ್ ಜಾರಿಯಾದ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ದಾಖಲಾಗಿದೆ. ನಗರದಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇದ್ದು, ಸರ್ಕಾರ ಹಂತಹಂತವಾಗಿ ಅನ್​​​ಲಾಕ್(Unlock) ಘೋಷಣೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಕುಸಿದ ಕೋವಿಡ್‌ ಆರ್ಭಟ: ನಗರದತ್ತ ಧಾವಿಸುತ್ತಿರುವ ಜನರಿಂದ ಟ್ರಾಫಿಕ್ ಜಾಮ್

ABOUT THE AUTHOR

...view details