ಕರ್ನಾಟಕ

karnataka

ರಾಜಧಾನಿಯಲ್ಲಿ ಕೊರೊನಾ ಅಬ್ಬರ: ಒಂದೇ ದಿನ 22 ಸಾವು, 2,233 ಕೇಸ್​​ ದಾಖಲು!

By

Published : Jul 30, 2020, 10:47 PM IST

ರಾಜ್ಯದಲ್ಲಿ ಇಂದು ಸಹ ಕೊರೊನಾ ಆರ್ಭಟ ಜೋರಾಗಿದೆ.ಅಲ್ಲದೆ ರಾಜಧಾನಿಯಲ್ಲಿ ಕೊರೊನಾ ಜನತೆಗೆ ಆತಂಕ ತಂದೊಡ್ಡಿದ್ದು, ಇಂದು 22 ಮಂದಿ ಸಾವಿಗೀಡಾಗಿದ್ದು, ಬರೋಬ್ಬರಿ 2,233 ಮಂದಿಗೆ ಸೋಂಕು ದೃಢಪಟ್ಟಿದೆ.

22 Corona infected people died in Bangalore in single day..2,233 new cases
ರಾಜಧಾನಿಯಲ್ಲಿ ಕೊರೊನಾ ಅಬ್ಬರ..ಒಂದೇ ದಿನ 22 ಸಾವು, 2,233 ಕೇಸ್​​ ದಾಖಲು

ಬೆಂಗಳೂರು:ನಗರದಲ್ಲಿ ಇಂದು 2,233 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ 22 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 53,324ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 36,523ಕ್ಕೆ ಬಂದು ನಿಂತಿದೆ.

ಇಂದು ಅತಿಹೆಚ್ಚು ಮಂದಿ ಗುಣಮುಖರಾಗಿದ್ದು, ಒಟ್ಟು 1,912 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೆಲವರು ಹೋಂ ಐಸೋಲೇಷನ್​ ಮುಗಿಸಿದ್ದಾರೆ. ಈವರೆಗೆ ಒಟ್ಟು 1,009 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ.

ಬಿಬಿಎಂಪಿ ಟಾಸ್ಕ್​​​​​ಫೋರ್ಸ್ ಕಮಿಟಿಯ ಸಲಹೆಯಂತೆ, ವಾರ್ಡ್ ಮಟ್ಟದಲ್ಲಿ ಕೆಲಸ ಮಾಡಲು ಸ್ವಯಂ ಸೇವಕರನ್ನು ನೇಮಿಸುವುದು ಬಹುದೊಡ್ಡ ತಲೆ ನೋವಾಗಿದೆ. ಕಂಟೈನ್ಮೆಂಟ್ ಝೋನ್​ಗಳನ್ನು ಕಡ್ಡಾಯವಾಗಿ ಬಂದ್ ಮಾಡಲು, ಆ ವ್ಯಾಪ್ತಿಯ ಹಿರಿಯರನ್ನು, ಇತರೆ ರೋಗಿಗಳನ್ನು ಟೆಸ್ಟ್ ಮಾಡಲು ವಾರ್ಡ್ ಲೆವೆಲ್ ತಂಡ ರಚನೆಯಲ್ಲಿ ವಿಳಂಬವಾಗುತ್ತಿದೆ.

ಈ ಹಿನ್ನೆಲೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಜೊತೆ ವಾರ್ ರೂಂನಲ್ಲಿ ಸಭೆ ನಡೆಸಿ, ಕೊರೊನಾ ತಡೆಯುವಿಕೆ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಿದರು.

ABOUT THE AUTHOR

...view details