ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು ಸಕ್ರಿಯ ಪ್ರಕರಣಗಳೇ ಒಂದು ಲಕ್ಷ ಸಮೀಪದಲ್ಲಿದೆ. ಇಂದು 1,95,047 ಜನರಿಗೆ ಕೋವಿಡ್ ಟೆಸ್ಟ್ ಮಾಡಿದ್ದು, 21,390 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,99,519 ಏರಿಕೆ ಆಗಿದೆ.
ಇತ್ತ 10 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 38,389 ತಲುಪಿದೆ. ಸಕ್ರಿಯ ಪ್ರಕರಣಗಳು 93,009 ರಷ್ಟಿವೆ. ಪಾಸಿಟಿವಿಟಿ ದರ ಶೇ. 10.96 ರಷ್ಟಿದೆ.