ETV Bharat Karnataka

ಕರ್ನಾಟಕ

karnataka

ETV Bharat / state

21 ಸಬ್ ರಿಜಿಸ್ಟ್ರಾರ್ ಕಚೇರಿಗಳ‌ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ.. 8 ಮಂದಿ ಮಧ್ಯವರ್ತಿಗಳು ವಶಕ್ಕೆ - ಲೋಕಾಯುಕ್ತ ದಾಳಿ

ಬೆಂಗಳೂರು ಸೇರಿದಂತೆ 21 ಸಬ್​ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು,​​ ವರ್ತೂರು ಉಪನೋಂದಣಿ ಕಚೇರಿಯಲ್ಲಿ 3.45 ಲಕ್ಷ ರೂ ನಗದು ಪತ್ತೆಯಾಗಿದೆ. ಈ ಸಂಬಂಧ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ಮಧ್ಯವರ್ತಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

21-sub-registrar-offices-raided-by-lokayukta-police
21 ಸಬ್ ರಿಜಿಸ್ಟ್ರಾರ್ ಕಚೇರಿಗಳ‌ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ : 8 ಮಧ್ಯವರ್ತಿಗಳು ವಶಕ್ಕೆ
author img

By

Published : Nov 3, 2022, 7:45 PM IST

ಬೆಂಗಳೂರು: ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಕುರಿತಂತೆ ಸಾರ್ವಜನಿಕರಿಂದ‌ ದೂರು ಬಂದ ಹಿನ್ನೆಲೆ ಬೆಂಗಳೂರು ಸೇರಿದಂತೆ 21 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ‌ ಪರಿಶೀಲನೆ ನಡೆಸಿದ್ದಾರೆ.

ಮಿತಿ ಮೀರಿದ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳ‌ ಬಗ್ಗೆ ಸಾರ್ವಜನಿಕರಿಂದ‌ ದೂರು ಬಂದ ಹಿನ್ನೆಲೆ ಸುಮಾರು 150 ಮಂದಿ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ‌ ವಿವಿಧೆಡೆ ದಾಳಿ ನಡೆಸಿದ್ದಾರೆ. ಬನ್ನೇರುಘಟ್ಟ, ಯಲಹಂಕ, ಮಹದೇಪುರ, ವರ್ತೂರು, ದೊಮ್ಮಲೂರು, ಬೊಮ್ಮನಹಳ್ಳಿ, ಬೇಗೂರು, ಜೆಪಿನಗರ, ಬನಶಂಕರಿ, ಬಸವನಗುಡಿ, ಕೆಂಗೇರಿ ನಾಗವಾರ, ಬೆಂಗಳೂರು ಗ್ರಾಮಾಂತರ ಸಬ್ ರಿಜಿಸ್ಟರ್‌ ಕಚೇರಿ, ರಾಮನಗರ, ಕನಕಪುರ ಸೇರಿದಂತೆ 21 ಕಡೆಗಳಲ್ಲಿ ಉಪ ನೋಂದಣಿ ಕಚೇರಿಗಳಲ್ಲಿ ಅಧಿಕಾರಿಗಳು ದಾಳಿ ‌ಮಾಡಿ ಪರಿಶೀಲನೆ ನಡೆಸಿದ್ದಾರೆ.

in article image
ವರ್ತೂರು ಉಪನೋಂದಣಿ ಕಚೇರಿಯಲ್ಲಿ 3.45 ಲಕ್ಷ ರೂ ನಗದು ಪತ್ತೆ

ಇನ್ನು, ವರ್ತೂರು ಉಪನೋಂದಣಿ ಕಚೇರಿಯಲ್ಲಿ 3.45 ಲಕ್ಷ ನಗದು ಪತ್ತೆಯಾಗಿದ್ದು, ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ಮಧ್ಯವರ್ತಿಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ :ಮೈಸೂರು: ತಟ್ಟೆ ಲೋಟ ಬಡಿದು ಕಬ್ಬು ಬೆಳೆಗಾರರಿಂದ ವಿಭಿನ್ನ ಪ್ರತಿಭಟನೆ

ABOUT THE AUTHOR

...view details