ಕರ್ನಾಟಕ

karnataka

ETV Bharat / state

ಸಿಎಂ ಸಚಿವಾಲಯದ ಕರ್ತವ್ಯದಿಂದ 21 ಸಿಬ್ಬಂದಿ ಬಿಡುಗಡೆ; ಕಾರಣ? - ಶಿವಶಂಕರ ನಾಯ್ಡು

ಹೆಚ್‌.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಿಯೋಜನೆಗೊಂಡಿದ್ದ 21 ಮಂದಿ ಸಿಬ್ಬಂದಿಯನ್ನು ಸಿಎಂ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

ವಿಧಾನಸೌಧ (ಸಂಗ್ರಹ ಚಿತ್ರ)

By

Published : Sep 19, 2019, 8:10 PM IST

ಬೆಂಗಳೂರು:ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಮಂದಿ ಸಿಬ್ಬಂದಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ಈ‌ ಸಿಬ್ಬಂದಿಯನ್ನು ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ತನ್ನ ಸಚಿವಾಲಯಕ್ಕೆ ನಿಯೋಜನೆಗೊಳಿಸಿದ್ದರು.

ಮುಖ್ಯಮಂತ್ರಿ ಸಚಿವಾಲಯ ಕರ್ತವ್ಯದಿಂದ 21 ಮಂದಿ ಸಿಬ್ಬಂದಿ ಬಿಡುಗಡೆ, ಆದೇಶದ ಪ್ರತಿ
ಇಂದು ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಸಚಿವಾಲಯದ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ತವ್ಯದಿಂದ ಬಿಡುಗಡೆಗೊಂಡ ಅಧಿಕಾರಿಗಳು:
ಅಧೀನ ಕಾರ್ಯದರ್ಶಿ ಶಿವಶಂಕರ ನಾಯ್ಡು, ಶಾಖಾಧಿಕಾರಿಗಳಾದ ರಾಜೇಶ್ ಎಸ್‌, ಹರೀಶ್, ಹಿರಿಯ ಸಹಾಯಕರಾದ ಸರಸ್ವತಿ ಎನ್‌. ಎಂ.ಎಸ್.ಪ್ರಕಾಶ್, ಎಸ್.ಆರ್.ಅಭಿನಂದನ್, ಎಸ್.ಆರ್.ಶಿಲ್ಪಾ, ರಮೇಶ್ ಆರ್.ಕೆ, ಸಹಾಯಕರಾದ ಎಚ್.ಎಸ್‌.ಚಂದ್ರೋಜಿ ರಾವ್, ಮರಿಲಿಂಗಯ್ಯ, ವೈರಮುಡಿ, ಜಿ.ಪಿ.ರಮೇಶ್, ಶೀಘ್ರ ಲಿಪಿಗಾರ ಗಣೇಶ್ ದರ್ಶನ್, ಕಿರಿಯ ಸಹಾಯಕ ಲಕ್ಷ್ಮಯ್ಯ, ಜಮೇದಾರ್ ರಾಜೇಗೌಡ, ಲಕ್ಷ್ಮಿನರಸಿಂಹಯ್ಯ, ಆರ್.ನಾಗೇಶ್, ಎಂ.ನಾರಾಯಣ್, ಜಗದೀಶ್, ಕೆ.ರಾಜ, ಮಂಜುನಾಥ್. ಎನ್

ABOUT THE AUTHOR

...view details