ಬೆಂಗಳೂರು: 21 ಡಿವೈಎಸ್ಪಿ ಹಾಗೂ 111 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶಕ್ಕೆ ತಡೆಹಿಡಿಯಲಾಗಿದೆ.
21 ಡಿವೈಎಸ್ಪಿ ಹಾಗೂ 111 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ.. - undefined
ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿಗಳು ಹಾಗೂ ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶಕ್ಕೆ ತಡೆ ಹಿಡಿಯಲಾಗಿದೆ.
![21 ಡಿವೈಎಸ್ಪಿ ಹಾಗೂ 111 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ..](https://etvbharatimages.akamaized.net/etvbharat/prod-images/768-512-3822667-thumbnail-3x2-govts.jpg)
ಪೊಲೀಸ್
ಮೈತ್ರಿ ಸರ್ಕಾರ ಕುಸಿತದ ಆತಂಕದ ಬೆಳವಣಿಗೆ ನಡುವೆಯೇ 21 ಡಿವೈಎಸ್ಪಿ ಹಾಗೂ 111 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಹೊರ ಬಿದ್ದ ಕೆಲವೇ ಗಂಟೆಗಳಲ್ಲೇ ಮತ್ತೆ ಅದಕ್ಕೆ ತಡೆ ನೀಡಲಾಗಿದೆ. ಈ ತಡೆ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್.ರಾಜು ಸೂಚಿಸಿದ್ದಾರೆ. ತರಾತುರಿಯಲ್ಲಿ ಇಷ್ಟೊಂದು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಮತ್ತೆ ಅದನ್ನ ಅಷ್ಟೇ ವೇಗದಲ್ಲಿ ತಡೆ ಹಿಡಿದಿದ್ಯಾಕೆ ಅನ್ನೋ ಪ್ರಶ್ನೆ ಕಾಡ್ತಿದೆ.
Last Updated : Jul 12, 2019, 11:44 PM IST