ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಇಂದು ಜೋರಾಗಿದ್ದು, ಒಂದೇ ದಿನ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಯಾದಗಿರಿಯಲ್ಲಿ 66 ಜನರಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿಂದು ದ್ವಿಶತಕ ಬಾರಿಸಿದ ಕೊರೊನಾ: ಮೂವರು ಸಾವು, 114 ಮಂದಿ ಡಿಸ್ಚಾರ್ಜ್! - ಕೋವಿಡ್ ಅಬ್ಬರ
ರಾಜ್ಯದಲ್ಲಿ ಇಂದು ಕೂಡ ಕೊರೊನಾ ವೈರಸ್ ದ್ವಿಶತಕ ಬಾರಿಸಿದ್ದು, 204 ಕೇಸ್ ಪತ್ತೆಯಾಗಿವೆ. ಕಳೆದ ಕೆಲ ದಿನಗಳಿಂದ ಸೋಂಕು ಕಾಣಿಸಿಕೊಳ್ಳದ ಉಡುಪಿಯಲ್ಲಿಂದು 22 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,245ಕ್ಕೆ ಏರಿಕೆಯಾಗಿದೆ. ಒಟ್ಟು 2976 ಜನರು ಗುಣಮುಖರಾಗಿದ್ದು, ಸದ್ಯ 3195 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 72 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು ಒಟ್ಟು 114 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಯಾದಗಿರಿಯಲ್ಲಿ ಇಂದು 66 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಉಡುಪಿ 22, ಬೆಂಗಳೂರು 17, ರಾಯಚೂರು 15, ಬೀದರ್ 14, ಕೋಲಾರ 06, ಮೈಸೂರು 05, ಬಾಗಲಕೋಟೆ ಹಾಗೂ ಉತ್ತರ ಕನ್ನಡ ತಲಾ 3 ಜನರಿಗೆ ಸೋಂಕು ತಗುಲಿದೆ. ಇಂದು ಸೋಂಕು ತಗುಲಿರುವವರಲ್ಲಿ 157 ಜನರು ಹೊರ ರಾಜ್ಯದ ಸಂಪರ್ಕ ಹೊಂದಿದವರಾಗಿದ್ದಾರೆ.