ಕರ್ನಾಟಕ

karnataka

ETV Bharat / state

ಆರ್ಥಿಕ ಸಂಕಷ್ಟದಿಂದ ಗತಿ ತಪ್ಪಿದ ಪ್ರಗತಿ: 2020-21ರ ಸಾಲಿನಲ್ಲಿ ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ ಆಗಿದ್ದು ಇಷ್ಟೇ! - 2020-21 ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಗೆ ಹಿನ್ನಡೆ

ಲಾಕ್‌ಡೌನ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ. ಆಯವ್ಯಯದಲ್ಲಿ ಘೋಷಿಸಿರುವ ಅನುದಾನಕ್ಕೆ ಪ್ರತಿಯಾಗಿ ಇಲಾಖಾವಾರು ಅಭಿವೃದ್ಧಿ ಕೆಲಸಗಳೂ ಕುಂಠಿತವಾಗಿವೆ. ಇತ್ತ ಆರ್ಥಿಕ ಇಲಾಖೆ ಆದಾಯದ ಕೊರತೆ ಹಿನ್ನೆಲೆ ಇಲಾಖಾವಾರು ಖರ್ಚು ವೆಚ್ಚಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಅಳೆದು ತೂಗಿ ಆರ್ಥಿಕ ಇಲಾಖೆ ಇಲಾಖೆಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಬಜೆಟ್ ನಲ್ಲಿ ಹಂಚಿಕೆಯಾಗಿರುವ ಅನುದಾನ ಬಿಡುಗಡೆ ಸಾಧ್ಯವಾಗದೆ, ಇಲಾಖಾವಾರು ಆರ್ಥಿಕ ಪ್ರಗತಿಗೂ ತೀವ್ರ ಹಿನ್ನಡೆಯಾಗಿದೆ.

2020-21 financial year departmental progress is poor
ಆರ್ಥಿಕ ಸಂಕಷ್ಟದಿಂದ ಗತಿ ತಪ್ಪಿದ ಪ್ರಗತಿ

By

Published : Feb 15, 2021, 9:55 AM IST

ಬೆಂಗಳೂರು: 2020-21 ಸಾಲಿನಲ್ಲಿ ಕೋವಿಡ್ 19ರ ಅಬ್ಬರಕ್ಕೆ ರಾಜ್ಯದ ಆರ್ಥಿಕತೆ ಸೊರಗಿ ಹೋಗಿದೆ. ಈ ಹಿನ್ನೆಲೆ ಇಲಾಖಾವಾರು ಅಭಿವೃದ್ಧಿ ಕೆಲಸಗಳ ಮೇಲೂ ಆರ್ಥಿಕ ಸಂಕಷ್ಟದ ಬರೆ ಜೋರಾಗಿ ಬಿದ್ದಿದೆ. ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು, ಇಲಾಖಾವಾರು ಆರ್ಥಿಕ ಪ್ರಗತಿ ನೀರಸವಾಗಿದೆ. ಅದರ ಸಂಪೂರ್ಣ ವರದಿ ಇಲ್ಲಿದೆ.

ಸಂಪನ್ಮೂಲ ಕ್ರೋಢೀಕರಣ ಕುಂಠಿತ, ಜಿಎಸ್​ಟಿ ಪರಿಹಾರ ಕಡಿತ ಹಾಗೂ ಕೇಂದ್ರದ ತೆರಿಗೆ ಪಾಲಿನಲ್ಲಿನ ಕಡಿತ ರಾಜ್ಯದ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳಿಸಿದೆ. ಇದರ ಎಫೆಕ್ಟ್ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳ ಮೇಲೂ ಬಿದ್ದಿದೆ. ಕಡಿಮೆ ಅನುದಾನ ಬಿಡುಗಡೆಗೊಳಿಸುವ ಮೂಲಕ ಇಲಾಖೆಗಳ ಕಾರ್ಯಕ್ರಮ ‌ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗಿದೆ.

2020-21 ಸಾಲಿನಲ್ಲಿ ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ ಅಂಕಿಅಂಶ
2020-21 ಸಾಲಿನಲ್ಲಿ ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ ಅಂಕಿಅಂಶ
2020-21 ಸಾಲಿನಲ್ಲಿ ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ ಅಂಕಿಅಂಶ
ಇಲಾಖಾವಾರು ಆರ್ಥಿಕ ಪ್ರಗತಿ ಕುಂಠಿತ:ಈಟಿವಿ ಭಾರತ್​​ಗೆ ಲಭ್ಯವಾಗಿರುವ ಮಾಹಿತಿ ಅಂಕಿಅಂಶದ ಪ್ರಕಾರ ಡಿಸೆಂಬರ್ ಅಂತ್ಯಕ್ಕೆ ಇಲಾಖಾವಾರು ಆರ್ಥಿಕ ಪ್ರಗತಿಯಲ್ಲಿ ಭಾರಿ ಕುಂಠಿತವಾಗಿದೆ‌. ಡಿಸೆಂಬರ್ ಅಂತ್ಯಕ್ಕೆ ಹಂಚಿಕೆಯಾದ ಅನುದಾನದ ಪ್ರತಿ ಕೇವಲ 53.85% ಮಾತ್ರ ಆರ್ಥಿಕ ಪ್ರಗತಿ ಸಾಧ್ಯವಾಗಿದೆ. 2020-21 ಸಾಲು ಮುಕ್ತಾಯದ ಹೊಸ್ತಿಲಲ್ಲಿ ಇದ್ದರೂ ಬಹುತೇಕ ಎಲ್ಲಾ ಇಲಾಖೆಗಳ ಆರ್ಥಿಕ ಪ್ರಗತಿ ಇನ್ನೂ 50% ಆಸುಪಾಸಿನಲ್ಲೇ ಇದೆ.
ಪ್ರಮುಖ ಇಲಾಖೆಗಳ ಆರ್ಥಿಕ ಪ್ರಗತಿ ವಿವರ:ಮೀನುಗಾರಿಕೆ ಇಲಾಖೆ:ಒಟ್ಟು ಅನುದಾನ- 308.65 ಕೋಟಿಬಿಡುಗಡೆ- 185.40 ಕೋಟಿ ರೂ. ಪ್ರಗತಿ - 39.04%
ಕಾರ್ಮಿಕ ಇಲಾಖೆ:ಒಟ್ಟು ಅನುದಾನ- 697.79 ಕೋಟಿ ರೂ. ಬಿಡುಗಡೆ- 336.98 ಕೋಟಿರೂ.ಪ್ರಗತಿ - 41.75%
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:ಒಟ್ಟು ಅನುದಾನ- 2154 ಕೋಟಿ ರೂ. ಬಿಡುಗಡೆ- 1028 ಕೋಟಿ ರೂ. ಪ್ರಗತಿ - 28.02%
ಸಮಾಜ ಕಲ್ಯಾಣ ಇಲಾಖೆ:ಒಟ್ಟು ಅನುದಾನ- 3739.63 ಕೋಟಿ ರೂ. ಬಿಡುಗಡೆ- 2135.91 ಕೋಟಿ ರೂ. ಪ್ರಗತಿ - 37.94%
ಆರೋಗ್ಯ ಇಲಾಖೆ:ಒಟ್ಟು ಅನುದಾನ- 9537 ಕೋಟಿ ರೂ. ಬಿಡುಗಡೆ- 5732 ಕೋಟಿ ರೂ. ಪ್ರಗತಿ - 50.82%
ಲೋಕೋಪಯೋಗಿ ಇಲಾಖೆ:ಒಟ್ಟು ಅನುದಾನ- 9007 ಕೋಟಿ ರೂ. ಬಿಡುಗಡೆ- 6068 ಕೋಟಿ ರೂ. ಪ್ರಗತಿ - 57.24%
ಪಶುಸಂಗೋಪನೆ ಇಲಾಖೆ:ಒಟ್ಟು ಅನುದಾನ- 2407 ಕೋಟಿ ರೂ. ಬಿಡುಗಡೆ- 1506 ಕೋಟಿ ರೂ. ಪ್ರಗತಿ - 51.85%
ತೋಟಗಾರಿಕೆ ಇಲಾಖೆ:ಒಟ್ಟು ಅನುದಾನ- 1038 ಕೋಟಿ ರೂ. ಬಿಡುಗಡೆ- 790 ಕೋಟಿ ರೂ. ಪ್ರಗತಿ - 56.88%
ಸಹಕಾರ ಇಲಾಖೆ:ಒಟ್ಟು ಅನುದಾನ- 2102.92 ಕೋಟಿ ರೂ. ಬಿಡುಗಡೆ- 1335 ಕೋಟಿ ರೂ. ಪ್ರಗತಿ - 60.04%
ಆಹಾರ ಇಲಾಖೆ:ಒಟ್ಟು ಅನುದಾನ- 3382 ಕೋಟಿ ರೂ. ಬಿಡುಗಡೆ- 1951.50 ಕೋಟಿ ರೂ. ಪ್ರಗತಿ - 53.23%
ವಸತಿ ಇಲಾಖೆ:ಒಟ್ಟು ಅನುದಾನ- 4134 ಕೋಟಿ ರೂ. ಬಿಡುಗಡೆ- 864 ಕೋಟಿ ರೂ. ಪ್ರಗತಿ - 41.16%
ಕೃಷಿ ಇಲಾಖೆ:ಒಟ್ಟು ಅನುದಾನ- 5973 ಕೋಟಿರೂ. ಬಿಡುಗಡೆ- 3388 ಕೋಟಿ ರೂ. ಪ್ರಗತಿ - 46.32%
ಕಂದಾಯ ಇಲಾಖೆ:ಒಟ್ಟು ಅನುದಾನ- 9867 ಕೋಟಿರೂ. ಬಿಡುಗಡೆ- 6291 ಕೋಟಿ ರೂ. ಪ್ರಗತಿ - 47.72%
ಸಣ್ಣ ನೀರಾವರಿ ಇಲಾಖೆ:ಒಟ್ಟು ಅನುದಾನ- 2217 ಕೋಟಿರೂ. ಬಿಡುಗಡೆ- 1571 ಕೋಟಿ ರೂ. ಪ್ರಗತಿ - 63.15%
ಗ್ರಾಮೀಣಾಭಿವೃದ್ಧಿ ಇಲಾಖೆ:ಒಟ್ಟು ಅನುದಾನ- 16322 ಕೋಟಿರೂ. ಬಿಡುಗಡೆ- 8815 ಕೋಟಿ ರೂ. ಪ್ರಗತಿ - 57.19%
ನಗರಾಭಿವೃದ್ಧಿ ಇಲಾಖೆ:ಒಟ್ಟು ಅನುದಾನ- 17257 ಕೋಟಿಬಿಡುಗಡೆ- 8049 ಕೋಟಿ ರೂ. ಪ್ರಗತಿ - 52.71%
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:ಒಟ್ಟು ಅನುದಾನ- 4778 ಕೋಟಿರೂ. ಬಿಡುಗಡೆ- 2988 ಕೋಟಿ ರೂ.ಪ್ರಗತಿ - 50.46%
ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ:ಒಟ್ಟು ಅನುದಾನ- 1389 ಕೋಟಿ ರೂ. ಬಿಡುಗಡೆ- 780 ಕೋಟಿ ರೂ.ಪ್ರಗತಿ - 42.12%
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:ಒಟ್ಟು ಅನುದಾನ- 907 ಕೋಟಿರೂ. ಬಿಡುಗಡೆ- 444 ಕೋಟಿ ರೂ. ಪ್ರಗತಿ - 39.60%
ಮೂಲಭೂತ ಸೌಕರ್ಯ ಇಲಾಖೆ:ಒಟ್ಟು ಅನುದಾನ- 807 ಕೋಟಿರೂ. ಬಿಡುಗಡೆ- 362 ಕೋಟಿ ರೂ.ಪ್ರಗತಿ - 33.57%
ಜಲಸಂಪನ್ಮೂಲ ಇಲಾಖೆ:ಒಟ್ಟು ಅನುದಾನ- 17197 ಕೋಟಿರೂ. ಬಿಡುಗಡೆ- 7717 ಕೋಟಿ ರೂ. ಪ್ರಗತಿ - 69.64%
ಇಂಧನ ಇಲಾಖೆ:ಒಟ್ಟು ಅನುದಾನ- 12960 ಕೋಟಿರೂ.ಬಿಡುಗಡೆ- 6566 ಕೋಟಿಪ್ರಗತಿ - 50.65%

ABOUT THE AUTHOR

...view details