ಕರ್ನಾಟಕ

karnataka

ETV Bharat / state

2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆ ಸ್ವರೂಪ, ಕಠಿಣತೆ ಮಟ್ಟ ಮುಂದುವರಿಸಿ ಆದೇಶ - ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ

2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಪ್ರಸಕ್ತ ಸಾಲಿನಲ್ಲೂ ಮುಂದುವರೆಸಿ ಶಿಕ್ಷಣ ಆದೇಶಿಸಿದೆ.

2019-20-sslc-exam-question-pattern-will-continue-from-this-year
2019-20ನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಶ್ನೆ ಸ್ವರೂಪ, ಕಠಿಣತೆ ಹೀಗಿರಲಿದೆ

By

Published : Jul 16, 2022, 9:15 AM IST

Updated : Jul 16, 2022, 10:44 AM IST

ಬೆಂಗಳೂರು:2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಪ್ರಸಕ್ತ 2022-23ನೇ ಸಾಲಿನಿಂದ ಅದೇ ವರ್ಗೀಕರಣದಂತೆ ಯಥಾ ರೀತಿ ಮುಂದುವರೆಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಶಾಲೆಗಳು ಭೌತಿಕವಾಗಿ 2 ರಿಂದ 3 ತಿಂಗಳು ವಿಳಂಬವಾಗಿ ಪ್ರಾರಂಭವಾಗಿರುವುದರಿಂದ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೇ. 20ರಷ್ಟು ಪಠ್ಯವಸ್ತುವನ್ನು ಕಡಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿದ್ದಂತೆಯೇ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆ ಮಾಡದೇ, ಪ್ರಶ್ನೆಪತ್ರಿಕೆಯ ಕಠಿಣತೆಯ ಮಟ್ಟವನ್ನು ಸುಲಭ ಪ್ರಶ್ನೆಗಳು ಶೇ.40/ಸಾಧಾರಣ ಪ್ರಶ್ನೆಗಳು ಶೇ.50/ಕಠಿಣ ಪ್ರಶ್ನೆಗಳು ಶೇ.10ರಂತೆ ವಿಂಗಡಿಸಲಾಗಿತ್ತು.

2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ, ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ. ಅದರಂತೆ ಸುಲಭ ಪಶ್ನೆಗಳು ಶೇ.30/ಸಾಧಾರಣ ಪ್ರಶ್ನೆಗಳು ಶೇ.50/ಕಠಿಣ ಪ್ರಶ್ನೆಗಳು ಶೇ.20ರಂತೆ ವಿಂಗಡಿಸಲಾಗಿತ್ತು. ಇದೀಗ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಸ್ವರೂಪ ಮತ್ತು ಕಠಿಣತೆ ಮಟ್ಟವನ್ನು ಯಾವುದೇ ಬದಲಾವಣೆ ಮಾಡದೇ ಅದೇ ರೀತಿ ಮುಂದಿನ ಶೈಕ್ಷಣಿಕ ವರ್ಷದಿಂದ ಮುಂದುವರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ವ್ಯಾಪಕ ಟೀಕೆಗೆ ಮಣಿದ ಸರ್ಕಾರ: ಒಂದೇ ದಿನದಲ್ಲಿ ಸರ್ಕಾರಿ ಕಚೇರಿಗಳ ಫೋಟೋ/ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ವಾಪಸ್​

Last Updated : Jul 16, 2022, 10:44 AM IST

For All Latest Updates

TAGGED:

ABOUT THE AUTHOR

...view details