ಕರ್ನಾಟಕ

karnataka

ETV Bharat / state

ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದ ಹಣವೆಷ್ಟು ಗೊತ್ತೇ? - ಮದ್ಯದಿಂದ ರಾಜ್ಯ ಸರ್ಕಾರಕ್ಕೆ ಆದಾಯ

ಮೇ 4 ರಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತು. ಮೇ 4 ರಿಂದ ಮೇ 27 ರವರೆ್ಗೆ ಒಟ್ಟು 1924.36 ಕೋಟಿ ರೂ.ಗಳು ಅಬಕಾರಿ ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದ್ದು, ಮತ್ತೆರಡು ದಿನದ ಆದಾಯ ಸೇರಿದರೆ 2000 ಕೋಟಿ ರೂ.ಗಳ ಗಡಿಯನ್ನು ದಾಟಿದೆ.

2000 crore Income to karnataka govt by alcohol
ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಲಾಭ

By

Published : May 29, 2020, 11:19 PM IST

ಬೆಂಗಳೂರು: ಕೊರೊನಾ ವೈರಸ್​ ಹಬ್ಬುವುದನ್ನು ತಡೆಯಲು ವಿಧಿಸಲಾದ ಲಾಕ್​ಡೌನ್​ ಬಳಿಕ ರಾಜ್ಯದಲ್ಲಿ ಮರು ಮದ್ಯ ಮಾರಾಟಕ್ಕೆ ಅನುಮತಿ ನೀಡಿದ 25 ದಿನಗಳಲ್ಲಿ 2,000 ಕೋಟಿ ರೂ. ಬೊಕ್ಕಸಕ್ಕೆ ಹರಿದುಬಂದಿದೆ. ಆದಾಯದ ಮೂಲವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸರ್ಕಾರಕ್ಕೆ ಸ್ವಲ್ಪ ಮಟ್ಟಿನ ಸಮಾಧಾನ ಸಿಕ್ಕಂತಾಗಿದೆ.

ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್​ನಿಂದಾಗಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಎರಡು ಹಂತದ ಲಾಕ್​ಡೌನ್ ಬಳಿಕ ಅಳೆದು‌ ತೂಗಿ ಕಡೆಗೂ ಮೇ 4ರಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿತು. ಮೇ 4ರಿಂದ ಮೇ 27ರ ತನಕ ಒಟ್ಟು 1,924.36 ಕೋಟಿ ರೂ. ಅಬಕಾರಿ ತೆರಿಗೆ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ. ಮತ್ತೆರಡು ದಿನದ ಆದಾಯ ಸೇರಿ 2,000 ಕೋಟಿ ರೂ. ಗಡಿ ದಾಟಿದೆ.

ಮದ್ಯ ಮಾರಾಟದ ಅಂಕಿಅಂಶ

ರಾಜ್ಯ ಸರ್ಕಾರ ಬಜೆಟ್ ಮಂಡಿಸಿದ್ದರೂ ಯಾವುದೇ ರೀತಿಯ ರಾಜಸ್ವ ಸಂಗ್ರಹ ಸರಿಯಾಗಿ ಆರಂಭಗೊಳ್ಳುವ ಮೊದಲೇ ಕೊರೊನಾ ಮಾಹಾಮಾರಿ ಕಾಲಿಟ್ಟು ಆರ್ಥಿಕ ಚಟುವಟಿಕೆ ಸ್ತಬ್ಧವಾಗುವಂತೆ ಮಾಡಿತು. ಸರ್ಕಾರಕ್ಕೆ ಆದಾಯವಿಲ್ಲದೇ ಇದ್ದರೂ ಕೊರೊನಾ ನಿಯಂತ್ರಣಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸುತ್ತಿದೆ. ವಿಪತ್ತು ನಿಧಿ, ಕೋವಿಡ್ ಪರಿಹಾರ ಇತ್ಯಾದಿಗಳನ್ನು ಬಳಸಿಕೊಂಡು ಪರಿಸ್ಥಿತಿ‌ ನಿಭಾಯಿಸುತ್ತಿದೆ.

ಕೊರೊನಾ ತಪಾಸಣೆ, ಚಿಕಿತ್ಸೆ, ಕ್ವಾರಂಟೈನ್, ಊಟ ಎಲ್ಲಾ ಖರ್ಚನ್ನೂ ಸರ್ಕಾರವೇ ಭರಿಸುತ್ತಿದೆ. ಇದರ ಜೊತೆ ವಲಸೆ ಕಾರ್ಮಿಕರಿಗೆ ಸಾರಿಗೆ ಸೇವೆಯನ್ನೂ ಉಚಿತವಾಗಿ ಕಲ್ಪಿಸಿದೆ. ಸಂಕಷ್ಟದಲ್ಲಿ ಸಿಲುಕಿರುವ ವರ್ಗಗಳಿಗೆ ನೆರವಾಗಲು 1,610 ಕೋಟಿ ರೂ.,137 ಕೋಟಿ ರೂ. ಮತ್ತು 500 ಕೋಟಿ ರೂ.ಯಂತೆ ಮೂರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಸರ್ಕಾರದ ಬೊಕ್ಕಸಕ್ಕೆ ಹರಿದುಬರುತ್ತಿರುವ ಹಣದ ಪ್ರಮಾಣ ತೀರಾ ಕಡಿಮೆಯಾಗಿತ್ತು. ಇದೀಗ ಅಬಕಾರಿ ತೆರಿಗೆ 2,000 ಕೋಟಿ ರೂ. ಹರಿದುಬಂದಿದ್ದು ಸರ್ಕಾರಕ್ಕೆ ಸ್ವಲ್ಪ ಮಟ್ಟಿನ ನೆಮ್ಮದಿ ತರುವಂತೆ ಮಾಡಿದೆ.

ಮದ್ಯ ಮಾರಾಟದ ಮಳಿಗೆ

ಪ್ರತಿ ದಿನದ ಆದಾಯದ ವಿವರ (ರೂ):

  • ಮೇ-04: 2.44 ಕೋಟಿ
  • ಮೇ-05: 200.41 ಕೋಟಿ
  • ಮೇ-06: 231.41 ಕೋಟಿ
  • ಮೇ-07: 167.99 ಕೋಟಿ
  • ಮೇ-08: 151.26 ಕೋಟಿ
  • ಮೇ-09: 1.34 ಕೋಟಿ
  • ಮೇ-10:
  • ಮೇ-11: 165.84 ಕೋಟಿ
  • ಮೇ-12: 87.57 ಕೋಟಿ
  • ಮೇ-13: 80.44 ಕೋಟಿ
  • ಮೇ-14: 70.37 ಕೋಟಿ
  • ಮೇ-15: 62.14 ಕೋಟಿ
  • ಮೇ-16: 81.86 ಕೋಟಿ
  • ಮೇ-17:
  • ಮೇ-18: 86.05 ಕೋಟಿ
  • ಮೇ-19: 69.02 ಕೋಟಿ
  • ಮೇ-20: 69.08 ಕೋಟಿ
  • ಮೇ-21: 60.15 ಕೋಟಿ
  • ಮೇ-22:113.18 ಕೋಟಿ
  • ಮೇ-23:
  • ಮೇ-24:
  • ಮೇ-25:
  • ಮೇ-26: 149.79 ಕೋಟಿ
  • ಮೇ-27: 73.74 ಕೋಟಿ

ABOUT THE AUTHOR

...view details