ಕರ್ನಾಟಕ

karnataka

ETV Bharat / state

ತಿಂಗಳಾಂತ್ಯದ ವೇಳೆಗೆ 200 ರಿಂದ 300 ಕೋಟಿ ರೂ. ಆದಾಯ ನಿರೀಕ್ಷೆ : ಸಚಿವ ಕೆ‌. ಗೋಪಾಲಯ್ಯ - 300 ಕೋಟಿ ರೂ. ಆದಾಯ ನಿರೀಕ್ಷೆ

ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬೆಂಲಿಸುವಿರಾ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಈಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾನು ಅವರ ಪರವಾಗಿ ನಿಲ್ಲುತ್ತೇನೆ. ಆದರೆ, ನಾನು ರಾಜಕೀಯದಲ್ಲಿ ಇನ್ನೂ ಚಿಕ್ಕವನು. ಆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ..

ಕೆ‌. ಗೋಪಾಲಯ್ಯ
ಕೆ‌. ಗೋಪಾಲಯ್ಯ

By

Published : Mar 30, 2021, 3:34 PM IST

ಬೆಂಗಳೂರು :ಸರ್ಕಾರ ಕೊಟ್ಟ ಟಾರ್ಗೆಟ್‌ನ ಈಗಾಗಲೇ ಮುಟ್ಟಿದ್ದೇವೆ. ಈ ತಿಂಗಳಾಂತ್ಯದಲ್ಲಿ ಇನ್ನು 200 ರಿಂದ 300 ಕೋಟಿ ರೂ. ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವರ್ಷ 22,700 ಕೋಟಿ ರೂ. ಗುರಿ ಇತ್ತು. ಅದು ಐದು ದಿನಗಳ ಹಿಂದೆಯೇ ಆಗಿದೆ. ಇನ್ನು, ಸಿಎಲ್ 7 ಮತ್ತು ಎಂಎಸ್​ಐಎಲ್​ಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ನಗರ ಸೇರಿ ಅನೇಕ ಕಡೆ ಗಾಂಜಾ ಬೆಳೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರ ಜತೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಗಾಂಜಾ, ಅಫೀಮು ಸೇರಿ ಮಾದಕ ವಸ್ತು ಮಾರಾಟದ ವಿರುದ್ಧ ಈಗಾಗಲೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಪೊಲೀಸರ ಜತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ‌ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಗೋಪಾಲಯ್ಯ

ಅಬಕಾರಿ ಇಲಾಖೆಗೆ ವಾಹನ ಖರೀದಿ :ಅಬಕಾರಿ ಇಲಾಖೆಗೆ ಏಪ್ರಿಲ್​ನಲ್ಲಿ 77 ಜೀಪ್​ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ಇನ್ಸ್​ಪೆಕ್ಟರ್ ಹಾಗೂ ಸರ್ಕಲ್ ಇನ್ಸ್​ಪೆಕ್ಟರ್ ಅವರಿಗೆ 300 ಬೈಕ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ಡಿಸಿ ಕಚೇರಿಗೆ 4 ರಿವಾಲ್ವಾರ್ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕೆಲ್ಲಾ ಅನುದಾನ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಹೇಳಿದರು.

ಸಿಡಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಲು ನಕಾರ :ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬೆಂಲಿಸುವಿರಾ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಈಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾನು ಅವರ ಪರವಾಗಿ ನಿಲ್ಲುತ್ತೇನೆ. ಆದರೆ, ನಾನು ರಾಜಕೀಯದಲ್ಲಿ ಇನ್ನೂ ಚಿಕ್ಕವನು. ಆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಇದನ್ನೂ ಓದಿ..ಯುವತಿ ಈಗಾಗಲೇ ಕೋರ್ಟ್ ಹಾಲ್​ನಲ್ಲಿದ್ದಾಳೆ: ಯುವತಿ ಪರ ವಕೀಲ ಜಗದೀಶ್ ಹೇಳಿಕೆ

ABOUT THE AUTHOR

...view details