ಕರ್ನಾಟಕ

karnataka

ETV Bharat / state

ಬ್ಯಾಂಕಾಕ್​ನಿಂದ ಬಂದ ಪ್ರಯಾಣಿಕನ ಸೂಟ್​ಕೇಸ್​ನಲ್ಲಿ ವಿಷಕಾರಿ ಕಿಂಗ್ ಕೋಬ್ರಾ, ಹೆಬ್ಬಾವುಗಳು ಪತ್ತೆ - ಬಾಲ್ ಹೆಬ್ಬಾವುಗಳು ಪತ್ತೆ

ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್​ಗಳನ್ನು ತಪಾಸಣೆ ನಡೆಸಿದಾಗ ಆತನ ಸೂಟ್​ಕೇಸ್​ನಲ್ಲಿ 20 ವಿಷಕಾರಿ ಹಾವುಗಳು ಪತ್ತೆಯಾಗಿವೆ.

ಪ್ರಯಾಣಿಕನ ಸೂಟ್​ಕೇಸ್​ನಲ್ಲಿ ಕಿಂಗ್​ ಕೋಬ್ರಾ
ಪ್ರಯಾಣಿಕನ ಸೂಟ್​ಕೇಸ್​ನಲ್ಲಿ ಕಿಂಗ್​ ಕೋಬ್ರಾ

By ETV Bharat Karnataka Team

Published : Sep 7, 2023, 9:23 PM IST

Updated : Sep 8, 2023, 10:30 AM IST

ದೇವನಹಳ್ಳಿ :ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್​ಗಳನ್ನ ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್​ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿವೆ. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳು ಪತ್ತೆಯಾಗಿವೆ.

ಪ್ರಯಾಣಿಕನ ಸೂಟ್​ಕೇಸ್​ನಲ್ಲಿ ಕಿಂಗ್​ ಕೋಬ್ರಾ

ಸೆಪ್ಟೆಂಬರ್​ 6 ರಂದು ಬ್ಯಾಂಕಾಕ್​ನಿಂದ ದೇವನಹಳ್ಳಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಬಂದಿಳಿದ್ದಿದ್ದು, ರಾತ್ರಿ 10:30ಕ್ಕೆ ಫ್ಲೈಟ್ ನಂ. ಎಫ್‌ಡಿ 137 ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್ ಗಳನ್ನ ಪರಿಶೀಲನೆ ಮಾಡಿದಾಗ ಸೂಟ್ ಕೇಸ್​ನಲ್ಲಿ 17 ಜೀವಂತ ಕಿಂಗ್ ಕೋಬ್ರಾಗಳು ಪತ್ತೆಯಾಗಿದೆ. ಜೊತೆಗೆ 55 ಬಾಲ್ ಹೆಬ್ಬಾವುಗಳು ಪತ್ತೆಯಾಗಿದೆ. 6 ಕಪುಚಿನ್ ಮಂಗಗಳು ಸತ್ತಿರುವುದು ಕಂಡುಬಂದಿದೆ. ಒಟ್ಟು 78 ಪ್ರಾಣಿಗಳನ್ನ ಪ್ರಯಾಣಿಕ ಅಕ್ರಮವಾಗಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಬ್ಯಾಗ್​ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ : ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಎರಡು ಟ್ರಾಲಿ ಬ್ಯಾಗ್​​ಗಳಲ್ಲಿ ಕಳ್ಳ ಸಾಗಣೆ ಮಾಡುತ್ತಿರುವುದನ್ನು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಪತ್ತೆ (ಆಗಸ್ಟ್​ 23-2023) ಹಚ್ಚಿದ್ದರು. ಪ್ರಯಾಣಿಕನನ್ನು ಬಂಧಿಸಿರುವ ಅಧಿಕಾರಿಗಳು, 234 ಕಾಡು ಪ್ರಾಣಿಗಳನ್ನು ಸಂರಕ್ಷಣೆ ಮಾಡಿದ್ದರು.

ಹೆಬ್ಬಾವು : ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 21ರ ರಾತ್ರಿ ಬ್ಯಾಂಕಾಕ್​ನಿಂದ ಬಂದ ವಿಮಾನ ಸಂಖ್ಯೆ ಎಫ್ ಡಿ-137ರಲ್ಲಿ ಪ್ರಯಾಣಿಕ ಬಂದಿಳಿದಿದ್ದ. ಪ್ರಯಾಣಿಕ ಗ್ರೀನ್ ಚಾನಲ್ ದಾಟಿ ಏರ್​​ಪೋರ್ಟ್​​ನ ಆಗಮನ ಪ್ರದೇಶದ ನಿರ್ಗಮನ ದ್ವಾರದ ಕಡೆಗೆ ಬರುತ್ತಿದ್ದ ಸಮಯದಲ್ಲಿ ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ತಪಾಸಣೆ ನಡೆಸಿದ್ದರು. ಆಗ ಎರಡು ಟ್ರಾಲಿ ಬ್ಯಾಗ್​ಗಳಲ್ಲಿ ಕಾಡು ಪ್ರಾಣಿಗಳನ್ನು ಸಾಗಿಸುತ್ತಿರುವುದು ಕಂಡು ಬಂದಿತ್ತು. ಅದರಲ್ಲಿ ಒಂದು ಟ್ರಾಲಿ ಬ್ಯಾಗ್​​ಗೆ ಆತ ಅನುಮತಿಯನ್ನೇ ಪಡೆದಿರಲಿಲ್ಲ ಎಂದು ಗೊತ್ತಾಗಿತ್ತು. ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 104 ರ ಪ್ರಕಾರ ಪ್ರಯಾಣಿಕನನ್ನು ಬಂಧಿಸಲಾಗಿತ್ತು ಮತ್ತು ರಕ್ಷಿಸಲಾದ ಕಾಡು ಪ್ರಾಣಿಗಳನ್ನು ಕಸ್ಟಮ್ಸ್ ಆಕ್ಟ್, 1962ರ ಸೆಕ್ಷನ್ 110 ರ ಅಡಿ ವಶಪಡಿಸಿಕೊಳ್ಳಲಾಗಿತ್ತು. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂಬುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ:ಬ್ಯಾಗ್​ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್​​ನಿಂದ 234 ವನ್ಯಜೀವಿಗಳ ರಕ್ಷಣೆ

Last Updated : Sep 8, 2023, 10:30 AM IST

ABOUT THE AUTHOR

...view details