ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 20 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ, ಡ್ರಗ್​ ಪೆಡ್ಲರ್​ಗಳ ಬಂಧನ - ಬೆಂಗಳೂರು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರ ಕಾರ್ಯಾಚರಣೆ

ಬೆಂಗಳೂರಿನಲ್ಲಿ ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿದಂತೆ ನಾಲ್ವರು ಡ್ರಗ್​ ಪೆಡ್ಲರ್​ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

20-lakhs-worth-of-drugs-seized-and-four-arrested-in-bengaluru
20-lakhs-worth-of-drugs-seized-and-four-arrested-in-bengaluru

By

Published : Apr 15, 2021, 10:09 AM IST

ಬೆಂಗಳೂರು:ನಗರದಲ್ಲಿ ಇಬ್ಬರು ನೈಜೀರಿಯನ್ ಪ್ರಜೆಗಳು ಸೇರಿದಂತೆ ನಾಲ್ವರು ಡ್ರಗ್​ ಪೆಡ್ಲರ್​ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿ, 20 ಲಕ್ಷ ರೂ. ಮೌಲ್ಯದ ಮಾದಕ ವಸ್ತು, 2 ದ್ವಿಚಕ್ರ ವಾಹನ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಮಾರಕಾಸ್ತ್ರ ಮತ್ತು ಮಾದಕ ವಸ್ತು

ಆಜಾ ಫ್ರಾನ್ಸ್ ಸಿಸ್, ಚರ್ಸ್ ಚಿಮಾ, ಮಲಂಗ್ ಪಾಷಾ, ಜಾಸಿರ್ ಕಾಂಡೆ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಐಟಿ ಉದ್ಯೋಗಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:'ಅಂಬೇಡ್ಕರ್ ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆ ಮಾಡುವ ಪ್ರಸ್ತಾವನೆ ಇಟ್ಟಿದ್ದರು'

ಬಂಧಿತರಿಂದ 200 ಎಕ್ಸ್​ಟಿಸಿ ಮಾತ್ರೆ, 153 ಗ್ರಾಂ ಎಂಡಿಎಂಎ, 5 ಮೊಬೈಲ್ ಫೋನ್, ಮಾರಕಾಸ್ತ್ರಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಕೋವಿಡ್‌ ಸೋಂಕಿಗೆ ಬಲಿ!

ABOUT THE AUTHOR

...view details