ಬೆಂಗಳೂರು:ಬಿಬಿಎಂಪಿ ನಗರದಲ್ಲಿ ಹೋಂ ಐಸೋಲೇಷನ್ನಲ್ಲಿದ್ದವರ ಸಾವಿನ ಬಗ್ಗೆ ಡೆತ್ ಆಡಿಟ್ ನಡೆಸಿದ್ದು, ಇದರ ವರದಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಮಾರ್ಚ್ 1ರಿಂದ ಜೂನ್ 15ರವರೆಗೆ, ಅಂದರೆ ಮೂರುವರೆ ತಿಂಗಳ ಅವಧಿಯಲ್ಲಿ ನಗರದಲ್ಲಿ ಹೋಂ ಐಸೋಲೇಷನ್ನಲ್ಲಿದ್ದವರ ಪೈಕಿ 910 ಮಂದಿ ಮೃತಪಟ್ಟಿದ್ದಾರೆ.
ಯಾವುದೇ ಸೋಂಕು ಲಕ್ಷಣ ತೀವ್ರವಾಗಿಲ್ಲದೇ, ಗುಣಮುಖರಾಗುತ್ತೇವೆ ಎಂಬ ಭರವಸೆಯಲ್ಲಿದ್ದ 910 ಮಂದಿಯನ್ನು 46 ದಿನದಲ್ಲಿ ಕೋವಿಡ್ ಬಲಿ ತೆಗೆದುಕೊಂಡಿದೆ. ಆದರೆ, ಆಘಾತಕಾರಿ ಸಂಗತಿಯೆಂದರೆ, ಬೇರೆ ಯಾವುದೇ ಖಾಯಿಲೆಗಳಿಲ್ಲದೆ ಆರೋಗ್ಯವಾಗಿದ್ದವರೂ ಸಹ ಕೋವಿಡ್ ತಗುಲಿ ಬರೋಬ್ಬರಿ 410 ಮಂದಿ ಮೃತಪಟ್ಟಿದ್ದಾರೆ.
ಇನ್ನು ಅನ್ಯ ಖಾಯಿಲೆಗಳಿದ್ದು ಕೋವಿಡ್ ಬಂದ ನಂತರ ಒಂದೂವರೆ ತಿಂಗಳಲ್ಲಿ ಹೋಂ ಐಸೋಲೇಷನ್ನಲ್ಲಿದ್ದ 500 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಅಥವಾ ವೈದ್ಯರನ್ನು ತಲುಪುವುದು ವಿಳಂಬವಾದ ಕಾರಣ 333 ಮಂದಿ, ಆಸ್ಪತ್ರೆ ದಾಖಲಿಸಲು ನಿರಾಕರಿಸಿದ ಕಾರಣ 475 ಮಂದಿ ಹಾಗೂ ಕ್ರಿಟಿಕಲ್ ಬೆಡ್ ಅಂದರೆ ಐಸಿಯು, ವೆಂಟಿಲೇಟರ್ ಬೆಡ್ಗಳು ಸಮಯಕ್ಕೆ ಸರಿಯಾಗಿ ಸಿಗದೆ 365 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತಪಟ್ಟವರ ವಯಸ್ಸು-ಮರಣ ಸಂಖ್ಯೆ
21-40 ವರ್ಷ 98 ಮಂದಿ
41-60 272
60-80 506
80 ಮೇಲ್ಪಟ್ಟವರು 33
ಪುರುಷರು 602
ಮಹಿಳೆಯರು 308