ಕರ್ನಾಟಕ

karnataka

ETV Bharat / state

ಕಲಬುರಗಿ: ಅತಿವೃಷ್ಟಿಗೆ 2.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿ - ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾ ಮಳೆ

ಕಲಬುರಗಿ ಜಿಲ್ಲೆಯಲ್ಲಿ ಅನ್ನದಾತನಿಗೆ ಲಾಭ ತಂದುಕೊಡುವ ಉದ್ದು, ಹೆಸರು, ಸಜ್ಜೆ, ಶೇಂಗಾ, ಸೋಯಾ, ತೊಗರಿ ಹೀಗೆ ಮುಂಗಾರು ಬೆಳೆಗಳು ರಣಭೀಕರ ಮಳೆಗೆ ಕೊಚ್ಚಿ ಹೋಗಿವೆ.

Heavy rainfall in Kalburgi district
ಜಲಾವೃತವಾದ ಜಮೀನು

By

Published : Nov 7, 2020, 6:09 PM IST

ಕಲಬುರಗಿ:ಇಪ್ಪತ್ತು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ದಾಖಲೆ ಮಳೆ ಜಿಲ್ಲೆಯಲ್ಲಿ ಸುರಿದಿದ್ದು, ಅತಿವೃಷ್ಟಿಯಿಂದ ಅನ್ನದಾತನ ಬದುಕು ಬರಿದಾಗಿ ಹೋಗಿದೆ. ಅತಿವೃಷ್ಟಿಗೆ ಜಿಲ್ಲೆಯಲ್ಲಿ ಬರೋಬ್ಬರಿ 2.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ.

ಉದ್ದು, ಹೆಸರು, ಸಜ್ಜೆ, ಶೇಂಗಾ, ಸೋಯಾ, ತೊಗರಿ ಹೀಗೆ ಮುಂಗಾರು ಬೆಳೆಗಳು ರಣಭೀಕರ ಮಳೆಗೆ ಕೊಚ್ಚಿ ಹೋಗಿವೆ. ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಹೋಗಿವೆ. ಅಳಿದುಳಿದ ಬೆಳೆಯನ್ನಾದರೂ ರಾಶಿ ಮಾಡಿ ಕಾಪಾಡಿಕೊಳ್ಳೋಣ ಎನ್ನುತ್ತಿದ್ದ ರೈತರಿಗೆ ವರುಣ ಬಿಟ್ಟೂ ಬಿಡದೆ ಕಾಟ ಕೊಟ್ಟಿದೆ.

ಬೆಳೆ ಹಾನಿ ಬಗ್ಗೆ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ. ಆದರೆ, ಎನ್​ಡಿಆರ್​ಎಫ್ ನಾರ್ಮ್ ಪ್ರಕಾರ ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಪರಿಹಾರ ₹6,800. ಆದರೆ, ಒಂದು ಎಕರೆಗೆ ಸುಮಾರು 10 ಸಾವಿರ ಖರ್ಚು ಮಾಡಿರುತ್ತೇವೆ. ಸರ್ಕಾರ ಕೊಡುವ ಪರಿಹಾರ ಯಾವುದಕ್ಕೂ ಸಾಲಲ್ಲ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ ರೈತರು.

ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಕೃಷಿ ಜಮೀನಿದ್ದು, ರೈತರು ತೊಗರಿ ಬೆಳೆಯನ್ನೇ ಹೆಚ್ಚು (ರಾಜ್ಯದಲ್ಲೇ ಹೆಚ್ಚು) ಬೆಳೆಯುತ್ತಾರೆ. ಅದರಲ್ಲೂ 6 ಲಕ್ಷಕ್ಕೂ ಅಧಿಕ ಹೆಕ್ಟೇರ್​​​​ನಲ್ಲಿ ತೊಗರಿ ಬೆಳೆಯುತ್ತಾರೆ. ಆದರೆ, ಈ ವರ್ಷ ರಾಜ್ಯದಲ್ಲಿಯೇ ಹೆಚ್ಚು ಮಳೆ ಜಿಲ್ಲೆಯಲ್ಲಿ ಸುರಿದಿದೆ. ಪರಿಣಾಮ 2.70 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಹಾನಿಗೊಂಡಿದೆ.

ಜಂಟಿ ಕೃಷಿ ನಿರ್ದೇಶಕ ರತೇಂದ್ರ ಸುಗೂರ

ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆ 552 ಮಿಲಿಮೀಟರ್ ಇತ್ತು. ಆದರೆ, ಮಳೆ ಬಂದಿದ್ದು 823 ಮಿಮೀ ಹಾಗೂ ಅಕ್ಟೋಬರ್​ನಲ್ಲಿ 122 ಮಿಮೀ ಹೆಚ್ಚುವರಿ ಮಳೆ ಸುರಿದಿದೆ. ಕಳೆದ ಬಾರಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 45 ಲಕ್ಷ ಕ್ವಿಂಟಲ್ ತೊಗರಿ ಬಂದಿತ್ತು. ಈ ವರ್ಷ 20 ಲಕ್ಷ ಕ್ವಿಂಟಾಲ್ ತೊಗರಿ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ. ಅಲ್ಲದೆ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಬಿತ್ತನೆಗೂ ಸಾಧ್ಯವಾಗುತ್ತಿಲ್ಲ‌. ಹೀಗಾಗಿ ಅನ್ನದಾತರು ಈ ವರ್ಷ ವರುಣನ ವಕ್ರದೃಷ್ಟಿಗೆ ಕಂಗೆಟ್ಟು ಹೋಗಿದ್ದಾರೆ.

ABOUT THE AUTHOR

...view details