ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 161 ಕೋವಿಡ್ ಪ್ರಕರಣ ಸಿಕ್ಕಿದ್ದು, ಇಬ್ಬರು ಒಂದೇ ದಿನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 5921 ಕೋವಿಡ್ ಪ್ರಕರಣ ದಾಖಲಾಗಿವೆ.
ರಾಜ್ಯದಲ್ಲಿ 161 ಕೊರೊನಾ ಕೇಸ್, ಚಾಮರಾಜನಗರಕ್ಕೂ ಹಬ್ಬಿದ ವೈರಸ್! - ಕರ್ನಾಟಕದಲ್ಲಿ ಕೊರೊನಾ
18:07 June 09
ರಾಜ್ಯದಲ್ಲಿ ಮುಂದುವರಿದ ಕೊರೊನಾ ರಣಕೇಕೆ
ಚಾಮರಾಜನಗರಕ್ಕೂ ಡೆಡ್ಲಿ ವೈರಸ್ ಹಬ್ಬಿದ್ದು, ಓರ್ವನಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಲ್ಲಿಯವರೆಗೆ 66 ಜನರು ಸಾವನ್ನಪ್ಪಿದ್ದು, 2,605 ಜನರು ಗುಣಮುಖರಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ 65 ವರ್ಷದ ಹಾಗೂ ಕಲಬುರಗಿಯಲ್ಲಿ 17 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಉಳಿದಂತೆ 3248 ಆ್ಯಕ್ಟಿವ್ ಪ್ರಕರಣಗಳಿವೆ.
ಕಲಬುರಗಿ 10, ಬೀದರ್ 9, ಶಿವಮೊಗ್ಗ 04, ಧಾರವಾಡ 02, ಚಾಮರಾಜನಗರ 01, ಮೈಸೂರು 02, ಚಿಕ್ಕಬಳ್ಳಾಪುರ 2 ಕೇಸ್, ಬೀದರ್ನಲ್ಲಿ 09 ಯಾದಗಿರಿ 61, ಬೆಂಗಳೂರು 29, ವಿಜಯಪುರ 02, ದಾವಣಗೆರೆ 08, ಕೊಪ್ಪಳ 06, ಬಾಗಲಕೋಟೆ, ತುಮಕೂರಿನಲ್ಲಿ ತಲಾ 1 ಪ್ರಕರಣ ಕಾಣಿಸಿಕೊಂಡಿವೆ.
ಯಾದಗಿರಿಯಲ್ಲಿ 642ಕ್ಕೆ ಏರಿಕೆಯಾಗಿದ್ದು, ಇಂದು ಕಂಡು ಬಂದಿರುವ ಸೋಂಕಿತರಿಗೆ ಮಹಾರಾಷ್ಟ್ರದಿಂದ ಬಂದವರು ಎಂದು ತಿಳಿದು ಬಂದಿದೆ.