ಬೆಂಗಳೂರು: ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳದಲ್ಲಿ ಬಿಗುವಿನ ವಾತವರಣವಿದ್ದು, ಇನ್ನೆರಡು ದಿನಗಳ ಕಾಲ 144 ಸೆಕ್ಷನ್ ಮುಂದುವರೆಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕೆ ಜಿ ಹಳ್ಳಿ, ಡಿ ಜೆ ಹಳ್ಳಿಯಲ್ಲಿ ಮತ್ತೆ 2 ದಿನ 144 ಸೆಕ್ಷನ್: ಕಮಲ್ ಪಂತ್ ಆದೇಶ - 144 ಸೆಕ್ಷನ್
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಮುಂದಿನ 2 ದಿನ ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ 144 ಸೆಕ್ಷನ್ ಮುಂದುವರೆಸಲಾಗಿದೆ.
ಕೆಜಿ ಹಳ್ಳಿ,ಡಿಜೆ ಹಳ್ಳಿಯಲ್ಲಿ ಮತ್ತೆ 2 ದಿನ 144 ಸೆಕ್ಷನ್
ಗಲಭೆಯಲ್ಲಿ ಭಾಗಿಯಾದವರು ತಲೆಮರೆಸಿಕೊಂಡಿರುವ ಕಾರಣ ಸದ್ಯ ಪೊಲೀಸರು ತಲಾಷ್ ಮುಂದುವರಿಸಿದ್ದಾರೆ. ಗುಂಪು ಸೇರುವುದು, ಪ್ರತಿಭಟನೆ ನಡೆಸುವುದು ಅಥವಾ ವಿನಾಕಾರಣ ಅಡ್ಡಾದಿಡ್ಡಿ ಓಡಾಟ, ಮಾರಕಾಸ್ತ್ರಗಳನ್ನ ಇಟ್ಟುಕೊಳ್ಳುವುದು ಸೇರಿದಂತೆ ಪೊಲೀಸ್ ಇಲಾಖೆ ಇವೆಲ್ಲಕ್ಕೂ ಬ್ರೇಕ್ ಹಾಕಬೇಕಿದೆ.
ಸದ್ಯ ಪೊಲೀಸರು ಡಿ. ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ವಿನಾಕಾರಣ ಓಡಾಡುವುದು, ಪೊಲೀಸರ ಮಾತು ಕೇಳದ ಆರೋಪಿಗಳ ಮೇಲೆ ಲಾಠಿ ಪ್ರಯೋಗ ನಡೆಸಲಾಗುತ್ತಿದೆ.