ಬೆಂಗಳೂರು: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಬಾಗಲಕೋಟೆಯ ಬಿವಿವಿ ಸಂಘದಿಂದ 2 ಕೋಟಿ ರೂ. ಹಾಗು ವಿವಿಧ ಸಹಕಾರ ಸಂಘಗಳಿಂದ 85 ಲಕ್ಷ ರೂ.ಗಳ ಚೆಕ್ ಅನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು.
ಸಿಎಂ ಕೋವಿಡ್ ನಿಧಿಗೆ ಬಿವಿವಿ ಸಂಘದಿಂದ 2 ಕೋಟಿ, ಸಹಕಾರ ಸಂಘಗಳಿಂದ 85 ಲಕ್ಷ ರೂ.ದೇಣಿಗೆ - ಸಿಎಂ ಕೋವಿಡ್ ನಿಧಿಗೆ ಬಿವಿವಿ ಸಂಘದಿಂದ 2 ಕೋಟಿ
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಂದು ವಿವಿಧ ಸಂಘ ಸಂಸ್ಥೆಗಳಿಂದ ಒಟ್ಟು 2.85 ಲಕ್ಷ ದೇಣಿಗೆ ನೀಡಲಾಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬಾಗಲಕೋಟೆಯ ಶಾಸಕ ಡಾ. ವೀರಣ್ಣ ಚರಂತಿಮಠರು ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಬಿ.ವಿ.ವಿ.ಸಂಘದಿಂದ ಕೊಡ ಮಾಡಿದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಕೊರೊನಾ ನಿಧಿ) ಎರಡು ಕೋಟಿ ರೂಪಾಯಿಗಳ ಚೆಕ್ಕನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಈ ಹಿಂದೆ ಪ್ರವಾಹದ ಸಂದರ್ಭದಲ್ಲಿ ಕೂಡಾ 2 ಕೋಟಿ ರೂಪಾಯಿಗಳನ್ನು ಪರಿಹಾರ ನಿಧಿಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಇದರೊಂದಿಗೆ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ವಿವಿಧ ಸಹಕಾರ ಸಂಘಗಳ ವತಿಯಿಂದ ಇಂದು 85 ಲಕ್ಷ ರೂ. ಗಳ ದೇಣಿಗೆಯ ಚೆಕ್ನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಈವರೆಗೆ ಸಹಕಾರ ಸಂಘಗಳ ವತಿಯಿಂದ ಒಟ್ಟಾರೆ 50.50 ಕೋಟಿ ರೂ.ಗಳ ದೇಣಿಗೆಯನ್ನು ಕೋವಿಡ್ ಪರಿಹಾರ ನಿಧಿಗೆ ನೀಡಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.