ಬೆಂಗಳೂರು:ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ತಾಂತ್ರಿಕವಾಗಿ ಬಳಸಲು ಅನುಕೂಲವಾಗುವಂತೆ ತಾಂತ್ರಿಕ ಪರಿಕರಗಳ ಸೂಟ್ ಯೋಜನೆ ಅನುಷ್ಠಾನಗೊಳಿಸಲು 2 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ಕನ್ನಡ ಲಿಪಿ ಆಧಾರಿತ ಯುಆರ್ಎಲ್ಗಳು ಮತ್ತು ಕನ್ನಡ ಇ-ಮೇಲ್ ಸೇವೆ, ಕನ್ನಡ ಶಬ್ದಕೋಶ, ಇ - ಕನ್ನಡ ಕಲಿಕಾ ಅಕಾಡೆಮಿ, ಯಾಂತ್ರಿಕ ಅನುವಾದ, ಲಿಪ್ಯಂತರ, ಕಾಗುಣಿತ ಪರಿಶೀಲನೆ, ಪಠ್ಯದಿಂದ ಪಠಣ, ಪಠಣದಿಂದ ಪಠ್ಯ ತಂತ್ರಾಂಶ, ಹೈಫನೇಷನ್, ಒಸಿಆರ್ ಉಪಕರಣಗಳು, ಕನ್ನಡ ಅಕ್ಷರ ಶೈಲಿಯ ಸಮೂಹ ಕನ್ನಡ ಚಾಟ್ - ಬಾಟ್ ತಂತ್ರಾಂಶ ಹೊಂದಿರುವ ಕನ್ನಡ ಭಾಷೆಯ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿಗೆ 2 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ.