ಬೆಂಗಳೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಎರಡು ಕೋಟಿ ರೂ.ಗಳ ದೇಣಿಗೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ಸಿಎಂ ಕೋವಿಡ್ ನಿಧಿಗೆ 2 ಕೋಟಿ ದೇಣಿಗೆ - ಸಿಎಂ ಕೋವಿಡ್ ನಿಧಿ
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಎರಡು ಕೋಟಿ ರೂ.ಗಳ ದೇಣಿಗೆ ನೀಡಲಾಗಿದೆ.
![ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ಸಿಎಂ ಕೋವಿಡ್ ನಿಧಿಗೆ 2 ಕೋಟಿ ದೇಣಿಗೆ 2-crore-donation-from-the-renewable-energy-development-corporation-to-cm-kovid-fund](https://etvbharatimages.akamaized.net/etvbharat/prod-images/768-512-8029020-thumbnail-3x2-news.jpg)
ಸಿಎಂ ಕೋವಿಡ್ ನಿಧಿಗೆ 2 ಕೋಟಿ ದೇಣಿಗೆ
ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ನೀಡಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್.ಬಿ. ಬುಡೆಪ್ಪ ಹಾಗೂ ಲೆಕ್ಕಪತ್ರ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿದ್ದಲಿಂಗ ಅವರು, ಸಿಎಂ ಬಿ.ಎಸ್. ಯಡಿಯೂರಪ್ಪನವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಕೋವಿಡ್ ನಿಧಿಗೆ 2 ಕೋಟಿ ರೂ.ಗಳ ಚೆಕ್ ಅನ್ನು ಸಿಎಂಗೆ ನೀಡಿದರು.