ಆನೇಕಲ್:ಇಲ್ಲಿನ ಚಂದಾಪುರ ರಸ್ತೆಯಲ್ಲಿ ಇಂದು ಇಬ್ಬರಲ್ಲಿ ಕೊರೊನಾ ಧೃಡಪಟ್ಟಿದ್ದು, ಈ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಆನೆಕಲ್: ಇಬ್ಬರಲ್ಲಿ ಕೊರೊನಾ ಧೃಡ... ಸೋಂಕಿತರನ್ನು ವಿಕ್ಟೋರಿಯಾಗೆ ರವಾನೆ - ಇಬ್ಬರಲ್ಲಿ ಕೊರೊನಾ ಧೃಡ ವಿಕ್ಟೋರಿಯಾಗೆ ರವಾನೆ
ತಮಿಳುನಾಡು-ಕರ್ನಾಟಕ ಗಡಿಯ ಸಿಪ್ಕಾಟ್ ಮೈಕ್ರೋಲ್ಯಾಬ್ ಕಾರ್ಖಾನೆಯಲ್ಲಿನ ವ್ಯಕ್ತಿಯೊಬ್ಬನಲ್ಲಿ ಕೊರೊನಾ ಕಂಡುಬಂದಿದ್ದು, ಈತನ ಪ್ರಾಥಮಿಕ ಸಂಪರ್ಕದಿಂದ ಚಂದಾಪುರದ GPR ಲೇಔಟ್ನಲ್ಲಿ ವಾಸವಿದ್ದ 37 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದೇ ರಸ್ತೆಯ ಸ್ಪರ್ಶ ಆಸ್ಪತ್ರೆ ಬಳಿ ಬಿಹಾರ ಮೂಲದ ಮತ್ತೊಬ್ಬನಿಗೂ ಸೊಂಕು ದೃಢಪಟ್ಟಿದೆ. ಈತ 63 ವರ್ಷದ ವ್ಯಕ್ತಿಗೆಯಾಗಿದ್ದು, ಕಳೆದ 20 ರಂದು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದ ಎಂದು ತಿಳಿದುಬಂದಿದೆ. ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ನಡೆಸಿದ ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಜ್ಞಾನ ಪ್ರಕಾಶ್ ತಿಳಿಸಿದ್ದಾರೆ.