ಬೆಂಗಳೂರು: ಮೆಡಿಕಲ್ ಡ್ರಗ್ ಮಾಫಿಯಾವು ರಾಜ್ಯ ಸರ್ಕಾರದ ಕಠಿಣ ನಿಯಮಗಳ ನಂತರವೂ ಮುಂದುವರೆದಿದ್ದು, ನಗರದಲ್ಲಿ ರೆಮ್ಡಿಸಿವಿರ್ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಹರಿನಾಥ್, ನಾರಾಯಣ ಸ್ವಾಮಿ ಎನ್ನುವವರೇ ಬಂಧಿತರು. 6 ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ಸಿಸಿಬಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಸರ್ಕಾರಿ ಬೆಲೆಗಿಂತ ದುಬಾರಿ ಬೆಲೆಗೆ ರೆಮ್ಡಿಸಿವಿರ್ಅನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು.