ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 1,987 ಜನರಿಗೆ ಕೋವಿಡ್ ಸೋಂಕು.. 37 ಮಂದಿ ಸಾವು - ಕರ್ನಾಟಕ ಕೋವಿಡ್​ ಸೋಂಕಿತ ಪ್ರಕರಣಗಳ ವರದಿ

ರಾಜ್ಯದಲ್ಲಿ 1,987 ಮಂದಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳು 23,796 ರಷ್ಟು ಇದೆ. ಇಂದು 37 ಸೋಂಕಿತರು ಮೃತರಾಗಿದ್ದಾರೆ.

1987-people-tested-positive-in-karnataka
ಕರ್ನಾಟಕ ಕೋವಿಡ್​ ಪ್ರಕರಣ ಅಪ್​ಡೇಟ್

By

Published : Jul 31, 2021, 7:26 PM IST

ಬೆಂಗಳೂರು:ರಾಜ್ಯದಲ್ಲಿಂದು 1,38,532 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, 1,987 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,05,124ಕ್ಕೆ ಏರಿಕೆ ಕಂಡಿದೆ.

1632 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,44,742 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 23,796 ರಷ್ಟು ಇದೆ. ಇಂದು 37 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,562ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇ1.43 ರಷ್ಟಿದೆ.

ರೂಪಾಂತರಿ ಅಪಡೇಟ್ಸ್:

1) ಡೆಲ್ಟಾ ( Delta/B.617.2) -1089
2) ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) - 159
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 3

ರೈಲ್ವೆ, ಬಸ್​​ ಪ್ರಯಾಣಕ್ಕೂ ಬೇಕು RTPCR ನೆಗಟಿವ್ ರಿಪೋರ್ಟ್:

ಕರ್ನಾಟಕ ಸರ್ಕಾರದ ಆದೇಶದಂತೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ರೈಲ್ವೆ ಪ್ರಯಾಣಿಕರು ಲಸಿಕೆ ಪಡೆದಿದ್ದರೂ ಸಹ ಆರ್​ಟಿಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ. ಈ ಕುರಿತು ಪ್ರಯಾಣದ 72 ಗಂಟೆಗಳ ಒಳಗೆ ಮಾಡಿಸಿದ ನೆಗಟಿವ್ ವರದಿ ಹೊಂದಿರಬೇಕು ಅಂತ ನೈರುತ್ಯ ರೈಲ್ವೆ ಇಲಾಖೆಯು ಟ್ವೀಟ್​ ಮೂಲಕ ತಿಳಿಸಿದೆ.

ಇದನ್ನೂ ಓದಿ: ಪದಕ ರಹಿತವಾಗಿ ಬಂದಿದ್ದಕ್ಕೆ ಕ್ಷಮೆ ಕೋರುವೆ: ಒಲಿಂಪಿಕ್ಸ್​​ನಲ್ಲಿ ನನಗೆ 'ಮಹಾಮೋಸ' ಎಂದ ಮೇರಿ ಕೋಮ್​!

ABOUT THE AUTHOR

...view details