ಕರ್ನಾಟಕ

karnataka

ETV Bharat / state

ಉದ್ಯಾನನಗರಿಯಲ್ಲಿಂದು 196 ಪಾಸಿಟಿವ್ ಪ್ರಕರಣ ಪತ್ತೆ: ಮೂವರ ಸಾವು

ಬೆಂಗಳೂರಿನಲ್ಲಿ ಒಂದೇ ದಿನ 196 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1272 ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿಗೆ ಮೂವರು ಬಲಿಯಾಗಿದ್ದಾರೆ.

ಕೊರೊನಾ
ಕೊರೊನಾ

By

Published : Jun 21, 2020, 9:51 PM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿಂದು 196 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಮೊದಲ ಬಾರಿಗೆ ಇಷ್ಟು ಜನ ಕೋವಿಡ್​ಗೆ ತುತ್ತಾಗಿದ್ದಾರೆ. ಈ ಮೂಲಕ ನಗರದಲ್ಲಿ ಸೋಂಕಿತರ ಸಂಖ್ಯೆ 1272 ಕ್ಕೆ ಏರಿಕೆಯಾಗಿದೆ. 17 ಜನ ಇಂದು ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ. 796 ಸಕ್ರಿಯ ಪ್ರಕರಣಗಳಿದ್ದು, 64 ಮಂದಿ ಮೃತಪಟ್ಟಿದ್ದಾರೆ.

ಉದ್ಯಾನನಗರಿಯಲ್ಲಿಂದು 196 ಪಾಸಿಟಿವ್ ಪ್ರಕರಣ ಪತ್ತೆ

ಇಂದು ನಗರದಲ್ಲಿ ಮೂವರು ಮೃತಪಟ್ಟಿದ್ದು, 53 ವರ್ಷದ ಮಹಿಳೆ ತೀವ್ರ ಜ್ವರ, ಶೀತ ಹಾಗೂ ಕಫ ಸಮಸ್ಯೆಯಲ್ಲಿದ್ದರು. 62 ವರ್ಷದ ವ್ಯಕ್ತಿ ಡಯಾಬಿಟಿಸ್, ಜ್ವರ ಹಾಗೂ ಸೋಂಕಿನ ಲಕ್ಷಣ ಹೊಂದಿದ್ದರು. ಹಾಗೂ 55 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಉದ್ಯಾನನಗರಿಯಲ್ಲಿಂದು 196 ಪಾಸಿಟಿವ್ ಪ್ರಕರಣ ಪತ್ತೆ

ನಗರದಲ್ಲಿ ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ವಾರ್ ರೂಮ್​​​ ವರದಿ ಪ್ರಕಾರ , ಮೇ. 30 ರ ವರೆಗೆ 358 ಪ್ರಕರಣ ಇದ್ರೆ, ಜೂನ್ ನಲ್ಲಿ 1279 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ 826 ರೋಗಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 16 ಪ್ರಕರಣಗಳು, ಬೆಂಗಳೂರು ಹೊರಗಿನದ್ದು 39 ಪ್ರಕರಣಗಳು ಕರ್ನಾಟಕ ಹೊರಭಾಗದ 8 ಪ್ರಕರಣಗಳಿದ್ದು, 390 ರೋಗಿಗಳ ವರದಿ ಇನ್ನು ಬಂದಿಲ್ಲ. ನಗರದಲ್ಲಿ 2286 ಪ್ರಾಥಮಿಕ ಸಂಪರ್ಕಿತರಿದ್ದು, 6363 ದ್ವಿತೀಯ ಸಂಪರ್ಕಿತರಿದ್ದಾರೆ.

ಉದ್ಯಾನನಗರಿಯಲ್ಲಿಂದು 196 ಪಾಸಿಟಿವ್ ಪ್ರಕರಣ ಪತ್ತೆ

ಮೊದಲ ಹದಿನಾಲ್ಕು ದಿನದಲ್ಲಿ ಗುಣಮುಖರಾಗುವವರ ಸಂಖ್ಯೆ ಸಾವಿರದವರೆಗೆ ಏರಿದ್ದು, ಉಳಿದಂತೆ 28 ದಿನದವರೆಗೆ ಇನ್ನೂರರಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 28 ದಿನದ ಬಳಿಕವೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ 238 ವಲಯಗಳಿದ್ದು, 40 ಪ್ರದೇಶಗಳು ಕಂಟೈನ್​ಮೆಂಟ್ ಮುಕ್ತವಾಗಿವೆ, 8 ಪ್ರದೇಶಗಳಿಗೆ ಕಂಟೈನ್​ಮೆಂಟ್ ವಿಸ್ತರಣೆಯಾಗಿದೆ.

ಅತಿಹೆಚ್ಚು ಕೋವಿಡ್ ರೋಗಿಗಳಿರುವ ವಾರ್ಡ್​ಗಳು:

  • ವಿಶ್ವೇಶ್ವರಪುರಂ
  • ಸಂಪಂಗಿ ರಾಮನಗರ
  • ಧರ್ಮರಾಯಸ್ವಾಮಿ ಟೆಂಪಲ್ ವಾರ್ಡ್
  • ಹೊಂಗಸಂದ್ರ
  • ಎಸ್. ಕೆ. ಗಾರ್ಡನ್
  • ಸಿದ್ಧಾಪುರ
  • ಅಗ್ರಹಾರ ದಾಸರಹಳ್ಳಿ
  • ಪಾದರಾಯನಪುರ

ABOUT THE AUTHOR

...view details