ಬೆಂಗಳೂರು:ನಗರದಲ್ಲಿ ಇಂದು ಸಹ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು, 1,953 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರು ನಗರದಲ್ಲಿಂದು 1,953 ಕೊರೊನಾ ಕೇಸ್ ಪತ್ತೆ: 16 ಮಂದಿ ಬಲಿ - ಕೊರೊನಾ ಲೇಟೆಸ್ಟ್ ನ್ಯೂಸ್ ಬೆಂಗಳೂರು
ಬೆಂಗಳೂರು ನಗರದಲ್ಲಿ ಇಂದು 1,953 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 5,827 ಮಂದಿ ಗುಣಮುಖರಾಗಿದ್ದಾರೆ.
1,953 ಕೊರೊನಾ ಪ್ರಕರಣ ಪತ್ತೆ
ಸೋಂಕಿತರ ಸಂಖ್ಯೆ 3,43,507ಕ್ಕೆ ಏರಿಕೆಯಾಗಿದೆ. ಇಂದು 5,827 ಮಂದಿ ಗುಣಮುಖರಾಗಿದ್ದು, ಈವರೆಗೆ 3,20,783 ಮಂದಿ ಬಿಡುಗಡೆ ಆಗಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 18,806ಕ್ಕೆ ಇಳಿಕೆಯಾಗಿದೆ.
ಇಂದು 16 ಮಂದಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3,917ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 464ಕ್ಕೆ ಏರಿಕೆಯಾಗಿದೆ.