ಕರ್ನಾಟಕ

karnataka

ETV Bharat / state

ಸಿಎಂ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ 19 ಅಧಿಕಾರಿಗಳಿಗೆ ಕಾರ್ಯ ಮುಕ್ತಗೊಳಿಸಿ ಆದೇಶ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಬಸವರಾಜ ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಈ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ 19 ಅಧಿಕಾರಿಗಳನ್ನು ಕಾರ್ಯ ಮುಕ್ತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸೌಧ
ವಿಧಾನಸೌಧ

By

Published : Aug 1, 2021, 4:57 PM IST

ಬೆಂಗಳೂರು: ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಕಾರ್ಯ ಮುಕ್ತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ನೇತೃತ್ವದ ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಹೀಗಾಗಿ ನಿಯಮದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ನಿಯೋಜನೆಗೊಂಡಿದ್ದ ಹಾಗೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕಾರ್ಯ ಮುಕ್ತಗೊಳಿಸಬೇಕಾಗಿದೆ. ಅದರಂತೆ ಆಗಸ್ಟ್ 2 ರಿಂದ ಜಾರಿಗೆ ಬರುವಂತೆ 19 ಅಧಿಕಾರಿಗಳನ್ನು ಕಾರ್ಯಮುಕ್ತಗೊಳಿಸಿ ಆದೇಶಿಸಲಾಗಿದೆ.

ಯಾರೆಲ್ಲಾ ಅಧಿಕಾರಿಗಳು ಕಾರ್ಯಮುಕ್ತ?:

ಎಂ.ಲಕ್ಷ್ಮೀ ನಾರಾಯಣ, ಸಿಎಂ ಸಲಹೆಗಾರ

ಡಾ. ಎ. ಲೋಕೇಶ್, ಸಿಎಂ ವಿಶೇಷ ಕರ್ತವ್ಯಾಧಿಕಾರಿ

ಹೆಚ್.ಎಸ್. ಸತೀಶ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ

ಟಿ. ಎಂ. ಸುರೇಶ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ

ಹಡಗಲಿ ಅರುಣ್ ಕುಮಾರ್, ವಿಶೇಷ ಕರ್ತವ್ಯಾಧಿಕಾರಿ

ಅರುಣ್ ಪುರ್ಟಾಡೋ, ಸಿಎಂ ಉಪಕಾರ್ಯದರ್ಶಿ

ಕೆ.ಎಸ್. ಕಿರಣ್ ಕುಮಾರ್, ವಿಶೇಷ ಕರ್ತವ್ಯಾಧಿಕಾರಿ

ಕೆ.ರಾಜಪ್ಪ, ರಾಜಕೀಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ

ಮಹೇಶ್ ಆರ್.ಕೆ, ಸಿಎಂ ಪರಿಹಾರ ನಿಧಿಯ ಲೆಕ್ಕಾಧಿಕಾರಿ

ಎಸ್. ನಾಗರಾಜಯ್ಯ, ತಾಂತ್ರಿಕ ‌ಸಲಹೆಗಾರರು

ಎಸ್. ರಮೇಶ್, ತಾಂತ್ರಿಕ ‌ಸಲಹೆಗಾರರು

ಎನ್. ಶಾಂತರಾಮ್, ಮಾಧ್ಯಮ ಸಂಯೋಜನಾಧಿಕಾರಿ

ಗಣೇಶ್ ಯಾಜಿ, ಸಾಂಸ್ಕೃತಿಕ ಸಮನ್ವಯಾಧಿಕಾರಿ

ಅಂಗಡಿ ಎಸ್.ಎ, ಸಿಎಂ ಕಾನೂನು ಸಲಹೆಗಾರರ ಆಪ್ತ ಕಾರ್ಯದರ್ಶಿ

ಎ.ಆರ್. ರವಿ, ಉಪ ಕಾರ್ಯದರ್ಶಿ (ಅಭಿವೃದ್ಧಿ & ಆಡಳಿತ)

ಕೆ.ಗಂಗಯ್ಯ, ಸಿಎಂ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ

ಜಿ.ಎಸ್, ಸುನಿಲ್, ಸಿಎಂ ಮಾಧ್ಯಮ ಸಲಹೆಗಾರ

ಕೆ. ಜಿ. ಲೋಕೇಶ್, ಸಿಎಂ ಶಿಕ್ಷಣ ಸುಧಾರಣೆಗಳ ಸಲಹೆಗಾರರ ಆಪ್ತ ಕಾರ್ಯದರ್ಶಿ

ಡಾ. ಆರ್.ಎಂ.ರಂಗನಾಥ್, ಶಿಕ್ಷಣ ಸುಧಾರಣೆಗಳ ಸಲಹೆಗಾರರ ವಿಶೇಷ ಕರ್ತವ್ಯಾಧಿಕಾರಿ

ಇವರನ್ನು ಅಧಿಕಾರದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಶಾಲೆಗಳ ಆರಂಭ ಸದ್ಯಕ್ಕಿಲ್ಲ, ಶಾಲಾ ಸಂಘಟನೆಗಳ ಜತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ : ಸಿಎಂ ಸ್ಪಷ್ಟನೆ

ABOUT THE AUTHOR

...view details