ಬೆಂಗಳೂರು:ರಾಜ್ಯದಲ್ಲಿಂದು ಬರೋಬ್ಬರಿ 1,502 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,016ಕ್ಕೆ ಏರಿಕೆಯಾಗಿದೆ. ಇಂದು 271 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ 8,334 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಇಂದು 1502 ಕೊರೊನಾ ಕೇಸ್ ಪತ್ತೆ, 19 ಮಂದಿ ಬಲಿ: ಬೆಂಗಳೂರಲ್ಲೇ ಹೆಚ್ಚಿನ ಪ್ರಕರಣ ದಾಖಲು! - ಕರ್ನಾಟಕ ಕೊರೊನಾ
ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 1,500ಕ್ಕೂ ಅಧಿಕ ಕೇಸ್ಗಳು ಪತ್ತೆಯಾಗಿವೆ.
ಸದ್ಯ 9,406 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಕೂಡ ಕೊರೊನಾಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 19 ಮಂದಿ ಮೃತಪಟ್ಟಿದ್ದು, ಈವರೆಗೆ 272 ಮಂದಿಯನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ.
ಐಸಿಯುನಲ್ಲಿ 161 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ಇಂದು 889 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 90, ಮೈಸೂರು 68, ಬಳ್ಳಾರಿ 65, ಧಾರವಾಡ 47, ವಿಜಯಪುರ ಹಾಗೂ ರಾಮನಗರದಲ್ಲಿ 39, ಕಲಬುರುಗಿ 38, ಬೀದರ್ 32, ತುಮಕೂರು 26 ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಇಂದು ಮೃತಪಟ್ಟಿರುವ 19 ಮಂದಿಯಲ್ಲಿ ಬೆಂಗಳೂರಲ್ಲಿ 3, ದಕ್ಷಿಣ ಕನ್ನಡ 3, ಬಳ್ಳಾರಿ 4, ಗದಗ, ಕೊಪ್ಪಳ, ಮೈಸೂರು, ಹಾಸನ, ತುಮಕೂರು, ಬೆಳಗಾವಿ, ಉತ್ತರ ಕನ್ನಡದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.